ಮದುವೆಯಾದ ಬಳಿಕ ಮಂಕಾಗಿದ್ದಾರಂತೆ ಸಮಂತಾ ಅಕ್ಕಿನೇನಿ…..!!

ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ನಾಗಾರ್ಜುನ ಅಕ್ಕಿನೇನಿ ಮನೆತನದ ಸೊಸೆ ಸಮಂತಾ, ಅದ್ಯಾಕೊ ಮದುವೆಯಾದ ಬಳಿಕ ಮಂಕಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಸಮಂತಾ ಮುಖದಲ್ಲಿ ಮದುವೆಯಾದ ಖುಷಿಯೇ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಅಲ್ಲದೆ ಸದಾ ಬ್ರ್ಯಾಂಡೆಡ್‌ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಸಮಂತಾ ಈ ಬಾರಿ ಅಗ್ಗದ ಡ್ರೆಸ್‌ ತೊಟ್ಟು ಬಂದಿದ್ದರು. ಆಶ್ಚರ್ಯವೆನಿಸಬಹುದು, ಆದರೆ ಇದು ನಿಜ. ಸಮಂತಾ ಧರಿಸಿದ್ದ ಶರ್ಟ್‌ ಬೆಲೆ 1500ರೂ, ಪ್ಯಾಂಟ್‌ ಬೆಲೆ 1900 ರೂಪಾಯಿಯಂತೆ. ಒಟ್ಟಾರೆ ಸಮಂತಾ ಧರಿಸಿದ್ದ ಬಟ್ಟೆ ಬೆಲೆ ಕೇವಲ 3500 ಮಾತ್ರ. ಈ ಉಡುಗೆಯಲ್ಲಿದ್ದ ಫೋಟೋವನ್ನು ಸಮಂತಾ ಇನ್ಸ್ಟ್ಗಾಗ್ರಾಂನಲ್ಲಿ ಹಾಕಿದ್ದು, ಇದಕ್ಕೆ ಕೀಪಿಂಗ್ ಇಟ್‌ ಕ್ಯಾಶುಯಲ್‌ ಎಂದು ಹೆಡ್‌ಲೈನ್‌ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ಸಮಂತಾ ತಾನು ಪ್ರೀತಿಸಿದ ಹುಡುಗ ನಾಗಚೈತನ್ಯರನ್ನು ಹಿಂದೂ ಹಾಗೂ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿ, ನಾಗಾರ್ಜುನ ಕುಟುಂಬದ ಸೊಸೆಯಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com