ಬೆದರಿಕೆ ಕರೆ ಹಿನ್ನೆಲೆ ಪೊಲೀಸರಿಂದ ಶೋಧ : ಬಸ್‌ ನಿಲ್ದಾಣದ ಬಳಿ ಲಘು ಬಾಂಬ್ ಪತ್ತೆ

ಮೈಸೂರು : ಮೈಸೂರಿನಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಲಘು ಬಾಂಬ್ ಪತ್ತೆಯಾಗಿದೆ. ಮೈಸೂರಿನ ಬಸ್  ನಿಲ್ದಾಣದ ಮುಂಭಾಗ ಪೊಟ್ಟಣವೊಂದು ಬಿದ್ದಿತ್ತು.  ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುವ ವೇಳೆ ಶೆಲ್‌ ಹಾಗೂ ವೈಯರ್‌ ಇರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬಳಿಕ ತಜ್ಞರು ವೈಯರ್‌ ಹಾಗೂ ಶೆಲ್‌ಗಳಿಂದ ಕೂಡಿದ್ದ ವಸ್ತುವನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಲಘು ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ ಮೈಸೂರು ಡಿಸಿಪಿ ವಿಷ್ಣುವರ್ಧನ್‌ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಇಂಟಲಿಜೆನ್ಸ್ ಎಸ್.ಪಿ. ಸೇರಿ ವಿವಿಧ‌ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೊಂದೆಡೆ ಅಪರಿಚಿತ ಕರೆ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದು ಭಯೋತ್ಪಾದಕರ ಕೃತ್ಯ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಬಾಂಬ್ ಇಟ್ಟು ಹೋದ ವ್ಯಕ್ತಿಗಳ ಪತ್ತೆಗೆ ತಂಡ ರಚಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com