ಜಯಲಲಿತಾ Video ಪ್ರಸಾರವನ್ನು ನಿಲ್ಲಿಸಿ : ಮಾಧ್ಯಮಗಳಿಗೆ ಚುನಾವಣಾ ಆಯೋಗ ಸೂಚನೆ

ಚೆನ್ನೈ : ಟಿಟಿವಿ ದಿನಕರಣ ಅವರ ಬಣ ಬಿಡುಗಡೆ ಮಾಡಿರುವ ಜಯಲಲಿತಾ ಅವರ ವಿಡಿಯೋ ಪ್ರಸಾರ ಮಾಡದಂತೆ ಚುನಾವಣಾ ಆಯೋಗ ಎಲ್ಲಾ ಸುದ್ದಿ ವಾಹಿನಿಗಳಿಗೂ ಪತ್ರದ ಮುಖೇನ ಮನವಿ ಸಲ್ಲಿಸಿದೆ.
ಚೆನ್ನೈನಲ್ಲಿ ಈ ಹಿಂದೆ ಜಯಲಲಿತಾ ಸ್ಪರ್ಧಿಸಿದ್ದ ಆರ್‌. ಕೆ ನಗರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ದಿನಕರನ್‌ ಬಣ ಜಯಾ ಆಸ್ಪತ್ರೆಯಲ್ಲಿರುವ ವಿಡಿಯೊ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ವೆಟ್ರಿವೇಲ್‌ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ದಿನಕರನ್‌ ಬಣ ನೀತಿ ಸಂಹಿತೆ ಉಲ್ಲಂಘಿಸಿ ಜನರ ಮನವೊಲಿಸುವ ಯತ್ನ ನಡೆಸಿರುವುದಾಗಿ ಆರೋಪಿಸಲಾಗಿದೆ.
 ಈ ಕುರಿತು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಆರ್‌. ಕೆ ನಗರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ಇಂತಹ ವಿಡಿಯೊ ಪ್ರಸಾರ ಮಾಡುವುದರಿಂದ ಮತದಾನ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಆದ್ದರಿಂದ ವಿಡಿಯೊ ಪ್ರಸಾರವನ್ನು ನಿಲ್ಲಿಸುವಂತೆ ಮಾಧ್ಯಮಗಳಿಗೆ ಸೂಚಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com