ಪಾಕಿಸ್ತಾನ ಗುಪ್ತಚರ ಸಂಸ್ಥೆಯಿಂದಲೇ ಹತ್ಯೆಯಾದನಾ ದಾವೂದ್‌ ಬಂಟ ಛೋಟಾ ಶಕೀಲ್‌ ?

ದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್‌ನ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಗುಪ್ತಚರ ಇಲಾಖೆಗೆ ಪಾಕಿಸ್ತಾನದಿಂದ ಎರಡು ದೂರವಾಣಿ ಧ್ವನಿ ಮುದ್ರಿಕೆಗಳು ಲಭ್ಯವಾಗಿದೆ. ಇದರಲ್ಲಿ ಶಕೀಲ್‌ ಸಾವಿನ ಕುರಿತ ಮಾಹಿತಿ ಇದೆ ಎನ್ನಲಾಗಿದೆ.
ವರದಿಯ ಪ್ರಕಾರ ಛೋಟಾ ಶಕೀಲ್‌ ಜನವರಿ 6ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯೊಂದಕ್ಕೆ ಹಾಜರಾಗಿದ್ದ. ಈ ವೇಳೆ ಆತನಿಗೆ ಹೃದಯಾಘಾತವಾಗಿತ್ತು. ಈ ವೇಳೆ ಆತನ ಅಂಗರಕ್ಷಕರು ಆತನನ್ನು ರಾವಲ್ಪಿಂಡಿಯಲ್ಲಿನ ಆಸ್ಪತ್ರೆಯೊಂದಕ್ಕೆ ಸೇರಿಸಲು ಕೊಂಡೊಯ್ಯುವ ವೇಳೆ ಸಾವಿಗೀಡಾಗಿದ್ದ ಎಂದಿದೆ.

ಮತ್ತೊಂದು ವರದಿ ಪ್ರಕಾರ ಪಾಕಿಸ್ತಾನದ ಐಎಸ್‌ಐ ಛೋಟಾ ಶಕೀಲ್‌ನನ್ನು ಹತ್ಯೆ ಮಾಡಿದೆ ಎನ್ನಲಾಗಿದೆ. ಘಟನೆ ನಡೆದ 2 ದಿನಗಳ ಬಳಿಕ ವಿಚಾರವನ್ನು ದಾವೂದ್‌ಗೆ ತಿಳಿಸಲಾಗಿದ್ದು, ಈ ಸುದ್ದಿ ತಿಳಿದ ಬಳಿಕ ದಾವೂದ್ ಆಘಾತಕ್ಕೊಳಗಾಗಿದ್ದ ಎಂದು ಹೇಳಲಾಗಿದೆ.

ಆದರೆ ಇದುವರೆಗೂ ಭಾರತೀಯ ಗುಪ್ತಚರ ಇಲಾಖೆಯಾಗಲಿ, ಯಾವುದೇ ಭದ್ರತಾ ಸಿಬ್ಬಂದಿಯಾಗಲಿ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com