ದಲಿತರ ಮತ ಪಡೆಯಲು “ಕೈ” ತಂತ್ರ : ರಾಜ್ಯದಲ್ಲಿ ಕಾಂಗ್ರೆಸ್‌ ಪರ ಜಿಗ್ನೇಶ್‌ ಮೇವಾನಿ ಪ್ರಚಾರ

ಬೆಂಗಳೂರು : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಕರ್ನಾಟಕದಲ್ಲೂ ಬಿಜೆಪಿ ತನ್ನ ಛಾಪನ್ನು ಮೂಡಿಸಲು ಹೋರಾಟ ಪ್ರಾರಂಭಿಸಿದೆ.

ಈ ಮಧ್ಯೆ ಗುಜರಾತ್‌ನಲ್ಲಿ ಮೋದಿಗೆ ಸೆಡ್ಡು ಹೊಡೆದು ವಡಗಾಂವ್‌ನಿಂದ ಚುನಾವಣೆಗೆ ನಿಂತು ಜಯಭೇರಿ ಭಾರಿಸಿದ್ದ ಜಿಗ್ನೇಶ್‌ ಮೇವಾನಿ ರಾಜ್ಯದಲ್ಲೂ ಬಿಜೆಪಿ ವಿರುದ್ದ ಪ್ರಚಾರಕ್ಕಿಳಿಯಲಿದ್ದಾರೆ.ಇತ್ತೀಚಿಗಷ್ಟೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಜಿಗ್ನೇಶ್‌, ಕರ್ನಾಟಕಕ್ಕೂ ಬಂದು ಇಲ್ಲಿಯೂ ಪ್ರಚರ ಮಾಡುವುದಾಗಿ ಹೇಳಿದ್ದು, ಇದರಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ.

ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು. ಶೀಘ್ರವೇ ಕರ್ನಾಟಕಕ್ಕೆ ಬರುತ್ತೇನೆ. ಇಲ್ಲಿಯೂ ನನ್ನ ಹೋರಾಟ ಮುಂದುವರಿಯುತ್ತದೆ. ಈಗ ಗೌರಿ ಇದ್ದಿದ್ದರೆ ಸಂತೋಷಪಡುತ್ತಿದ್ದರು. ಅವರೇ ವಿಮಾನದ ಟಿಕೆಟ್‌ ಬುಕ್‌ ಮಾಡಿ ನನ್ನನ್ನು ಕರ್ನಾಟಕಕ್ಕೆ ಕರೆಸಿಕೊಳ್ಳುತ್ತಿದ್ದರು ಎಂದಿದ್ದಾರೆ.

ಫೆಬ್ರವರಿ ತಿಂಗಳಿನಿಂದ ರಾಜ್ಯದಲ್ಲಿ ದಲಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಜಿಗ್ನೇಶ್‌ ಪ್ರಚಾರ ಮಾಡಲಿದ್ದು, ಸಿಎಂ ಸಿದ್ದರಾಮಯ್ಯ ಸಹ ಅವರೊಂದಿಗೆ ಪ್ರವಾಸ ಮಾಡುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com