Ranaji Semifinal : ಗುರ್ಬಾನಿ ಮಾರಕ ದಾಳಿ : ಸಂಕಷ್ಟದಲ್ಲಿ ಕರ್ನಾಟಕ

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿದೆ. ಗೆಲ್ಲಲು 198 ರನ್ ಗುರಿಯನ್ನು ಬೆನ್ನತ್ತಿರುವ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ.

ಕರ್ನಾಟಕಕ್ಕೆ ಗೆಲ್ಲಲು ಇನ್ನೂ 87 ರನ್ ಅಗತ್ಯವಿದ್ದು, ಕೇವಲ 3 ವಿಕೆಟ್ ಮಾತ್ರ ಬಾಕಿಯಿವೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಯಕ ವಿನಯ್ ಕುಮಾರ್ (19*) ಹಾಗೂ ಶ್ರೇಯಸ್ ಗೋಪಾಲ್ (1*) ಅಜೇಯರಾಗುಳಿದಿದ್ದಾರೆ.

ಬುಧವಾರ ನಡೆದ ನಾಲ್ಕನೇ ದಿನದಾಟದಲ್ಲಿ ವಿದರ್ಭ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 313 ಕ್ಕೆ ಆಲೌಟ್ ಆಯಿತು. ವಿದರ್ಭ ಪರವಾಗಿ ಗಣೇಶ್ ಸತೀಶ್ 81, ಅಪೂರ್ವ್ ವಾಂಖಡೆ 49, ಆದಿತ್ಯ ಸರವಟೆ 55 ರನ್ ಗಳಿಸಿದರು. ಕರ್ನಾಟಕದ ಪರವಾಗಿ ವಿನಯ್ ಕುಮಾರ್ 3, ಸ್ಟುವರ್ಟ್ ಬಿನ್ನಿ 3 ಹಾಗೂ ಶ್ರೀನಾಥ್ ಅರವಿಂದ್ 2 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com