Cricket : 1st T20 : ಭಾರತಕ್ಕೆ 93 ರನ್ ಜಯ : ಮಿಂಚಿದ ರಾಹುಲ್, ಚಹಲ್

ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 93 ರನ್ ಗಳಿಂದ ಜಯಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 180 ರನ್ ಮೊತ್ತ ಸೇರಿಸಿತು. ಭಾರತದ ಪರವಾಗಿ ಕೆ.ಎಲ್ ರಾಹುಲ್ 61, ಎಮ್ ಎಸ್ ಧೋನಿ 39*, ಮನೀಶ್ ಪಾಂಡೆ 32* ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ತಿಸಾರಾ ಪೆರೆರಾ, ನುವಾನ್ ಪ್ರದೀಪ್, ಏಂಜೆಲೋ ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆದರು.

181 ರನ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 16 ಓವರುಗಳನ್ನು ಎದುರಿಸಿ 87 ಕ್ಕೆ ಆಲೌಟ್ ಆಯಿತು. ಯಜುವೇಂದ್ರ ಚಹಲ್ 4, ಹಾರ್ದಿಕ್ ಪಾಂಡ್ಯ 3, ಕುಲದೀಪ್ ಯಾದವ್ 2 ಹಾಗೂ ಜಯದೇವ್ ಉನಾದ್ಕಟ್ 1 ವಿಕೆಟ್ ಪಡೆದರು. 4 ವಿಕೆಟ್ ಪಡೆದು ಮಿಂಚಿದ ಯಜುವೇಂದ್ರ ಚಹಲ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.