Bangalore : “ಸನ್ನಿ ನೈಟ್‌”ನಲ್ಲಿ ಸನ್ನಿಯೇ ಇರಲ್ಲವಂತೆ….ಕಾರಣವೇನು…?

ಬೆಂಗಳೂರು : ಡಿಸೆಂಬರ್‌ 31ರಂದು ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ನಡೆಯಬೇಕಿದ್ದ ಸನ್ನಿ ನೈಟ್ಸ್‌ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಬರಲ್ಲ ಎಂದಿದ್ದಾರಂತೆ.

ಹೌದು ಈ ಕುರಿತು ಸ್ವತಃ ಸನ್ನಿ ಲಿಯೋನ್‌ ಟ್ವೀಟ್ ಮಾಡಿದ್ದು, ಬೆಂಗಳೂರಿನ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಆದ್ದರಿಂದ ನಾನು ಅಲ್ಲಿಗೆ ಬರುವುದಿಲ್ಲ. ನನಗೆ ಜನರ ಯೋಗಕ್ಷೇಮ ಮುಖ್ಯ ಎಂದಿದ್ದಾರೆ.

ಕೆಲದಿನಗಳಿಂದ ಸನ್ನಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಸನ್ನಿ ಫೋಟೋವನ್ನು ಸುಟ್ಟು, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ದೆ, ಬೆಂಗಳೂರು ಪೊಲೀಸರು ಹಾಗೂ ಸರ್ಕಾರ ಸಹ ಸನ್ನಿ ಕಾರ್ಯಕ್ರಮವನ್ನು ಬ್ಯಾನ್ ಮಾಡಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಪೊಲೀಸರಿಗೇ ಸೆಡ್ಡು ಹೊಡೆದಿದ್ದ ಕಾರ್ಯಕ್ರಮ ಆಯೋಜಕರು ಕೋರ್ಟ್‌ ಮೊರೆ ಹೋಗಿದ್ದರು.

ಈ ವಿಚಾರ ಸನ್ನಿಗೆ ತಲುಪಿದ್ದು, ನಾನು ಕಾರ್ಯಕ್ರಮಕ್ಕೆ ಬರಲ್ಲ. ನನಗೆ ನನ್ನ ಅಭಿಮಾನಿಗಳ ಯೋಗಕ್ಷೇಮ, ಸೇಫ್ಟಿ ಮುಖ್ಯ. ಅದಕ್ಕಾಗಿ ಬೆಂಗಳೂರಿಗೆ ಬರುವ ನನ್ನ ಕಾರ್ಯಕ್ರಮವನ್ನು ನಿಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com