ಕನ್ನಡ ಬರಲ್ಲ ಎಂದ ಕಾಶ್ಮೀರಿ ಯುವಕರ ಮೇಲೆ ಹಲ್ಲೆ : ಇಬ್ಬರ ಬಂಧನ

ಬೆಂಗಳೂರು : ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕಾಶ್ಮೀರದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹರೀಶ್‌ (23), ಮಹೇಶ್‌ (24) ಎಂದು ತಿಳಿದುಬಂದಿದೆ.

ಒಂದೂವರೆ ವರ್ಷದ ಹಿಂದೆ ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದ ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿ ಲಿಸಾನ್‌ ಅಹ್ಮದ್‌ (24) ಅಣ್ಣನ ಜೊತೆ ನಾಗಶೆಟ್ಟಹಳ್ಳಿಯಲ್ಲಿ ನೆಲೆಸಿದ್ದರು. ಡಿಸೆಂಬರ್‌10ರ ರಾತ್ರಿ ಊಟಕ್ಕೆಂದು ಹೋಗಿ ಮನೆಗೆ ವಾಪಸ್ಸಾಗುವಾಗ ಬಸ್‌ನಿಲ್ದಾಣದ ಬಳಿ ಬೈಕ್‌ನಲ್ಲಿ ಬಂದ ನಾಲ್ವರು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಭಾಷೆ ಅರ್ತವಾಗದ ಹಿನ್ನೆಲೆಯಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಕೇಳಿದ್ದಾರೆ. ಬಳಿಕ ನಾಲ್ವರಲ್ಲಿ ಒಬ್ಬ ಕನ್ನಡದಲ್ಲಿ ಮಾತಾಡು ಎಂದು ಗದರಿದ್ದಾನೆ. ಕನ್ನಡ ಬರುವುದಿಲ್ಲ ಎಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ತೆಲೆಗೆ ಹೊಡೆದಿದ್ದಾರೆ. ಜೊತೆಗೆ ಕಾರಿನ ಗಾಜನ್ನು ಒಡೆದು ಪರಾರಿಯಾಗಿದ್ದಾರೆ

ಈ ಸಂಬಂಧ ಲಿಸಾನ್‌ ಸಂಜಯ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸಪು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರನ್ನು ಪತ್ತೆ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.