ಮೈಸೂರಿನಲ್ಲೊಂದು ಲವ್ ಜಿಹಾದ್‌ ? : ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ನಾಪತ್ತೆ

ಶಿವಮೊಗ್ಗ : ಮೈಸೂರಿನಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ವಿರುದ್ಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಲವ್‌ ಜಿಹಾದ್‌ ಪ್ರಕರಣ ದಾಖಲಾಗಿದೆ.

ಅನುಷಾ ಹೆಗಡೆ ಎಂಬ ಯುವತಿ ಮೈಸೂರಿನಲ್ಲಿ ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ವೇಳೆ ಜಾವೀದ್‌ ಖಾನ್‌ ಎಂಬಾತನ ಜೊತೆ ವಿವಾಹವಾಗಿದ್ದಾಳೆ. ಇದು ಲವ್‌ ಜಿಹಾದ್‌ ಪ್ರಕರಣ ಎಂದು ಅನುಷಾ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಮೂಲದ ಸಂಗೀತ ವಿದ್ವಾನ್‌  ಒಬ್ಬರ ಪುತ್ರಿಯಾಗಿರುವ ಅನುಷಾ ಪೋಷಕರ ವಿರೋಧದ ನಡುವೆ ಜಾವಿದ್‌ನನ್ನು ಮದುವೆಯಾಗಿದ್ದಳು. ಮದುವೆಯಾದ ಕೆಲ ದಿನಗಳ ಬಳಿಕ ಮನೆಗೆ ವಾಪಸ್ಸಾಗಿ ತಾನು ಅನುಭವಿಸುತ್ತಿದ್ದ ಚಿತ್ರಹಿಂಸೆ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೆ ತನ್ನನ್ನು ಜಾವಿದ್‌ ಗೃಹಬಂಧನದಲ್ಲಿಟ್ಟು ಹಿಂಸಿಸುತ್ತಿದ್ದಾನೆ. ಆತನ ಇಬ್ಬರು ಹೆಂಡತಿಯರ ಮಗುವಿನ ಕೆಲಸವನ್ನೂ ಮಾಡಿಸಿಕೊಳ್ಳುತ್ತಿರುವುದಾಗಿ ಪೋಷಕರ ಬಳಿ ಅಳಲು ತೋಡಿಕೊಂಡಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈಗ ಮತ್ತೆ ಅನುಷಾ ಜಾವಿದ್‌ನ ಬಳಿ ತೆರಳಿದ್ದು, ಜಾವಿದ್‌ ಅನುಷಾಳ ಬ್ರೈನ್‌ವಾಷ್‌ ಮಾಡಿ ಮತ್ತೆ ಆಕೆಯನ್ನು ಕರೆದೊಯ್ದಿದ್ದಾನೆ. ಈಗಾಗಲೆ ಅವನಿಗೆ ಇಬ್ಬರು ಹೆಂಡತಿಯರಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.

 

Leave a Reply

Your email address will not be published.