ರೋಹಿತ್ ಆ ದಿನವನ್ನು ಎಂದೂ ಮರೆಯುವುದಿಲ್ಲವಂತೆ ‘ : ಹಿಟ್ ಮ್ಯಾನ್ ಹೇಳಿದ್ದೇನು..?

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಅತ್ಯಂತ ಸ್ಮರಣೀಯ ದಿನ ಯಾವುದೆಂದು ಹಿಟ್ ಮ್ಯಾನ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುಂಚೆ ಶ್ರೀಲಂಕಾ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ವಿರಾಟ್ ಕೊಹ್ಲಿಯವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದರು. ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತದ ನಾಯಕನ ಜವಾಬ್ದಾರಿಯನ್ನು ರೋಹಿತ್ ವಹಿಸಿಕೊಂಡಿದ್ದರು. ಆ ದಿನ ಯಾವತ್ತೂ ಮರೆಯಲಾಗದ್ದು ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ.

‘ ನಾಯಕನಾಗಿ ಕೈಯಲ್ಲಿ ಟೀಮ್ ಶೀಟ್ ಹಿಡಿದು ನಡೆದ ಕ್ಷಣವನ್ನು ಬೇರೆ ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಆ ದಿನವನ್ನು ನಾನು ಇಡೀ ಜೀವನ ನೆನಪಿನಲ್ಲಿಟ್ಟುಕೊಳ್ಳತ್ತೇನೆ. ಶ್ರೇಷ್ಟ ಕೌಶಲ್ಯವನ್ನು ಹೊಂದಿರುವ ನಮ್ಮ ಆಟಗಾರರ ಜೊತೆ ಆಡಲು ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಇದಕ್ಕಿಂತ ಹೆಚ್ಚು ಸಂತೋಷದ ಸಂಗತಿಯಿಲ್ಲ ‘ ಎಂದು ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com