ಚುನಾವಣೆ ಭರಾಟೆಯ ಮಧ್ಯೆ ಸದ್ದಿಲ್ಲದೆ ಜಿಯೋದಿಂದ ಹೊಸ ನ್ಯೂಸ್‌……ಏನದು ?

ದೇಶದ ಪ್ರತೀ ಪ್ರಜೆಯೂ ಇಂಟರ್‌ನೆಟ್‌ ಬಳಸುವಂತಾಗಬೇಕು ಎಂಬ ಉದ್ದೇಶದಿಂದ ಜಿಯೋ ಎಲ್ಲರಿಗೂ ಉಚಿತ ಇಂಟರ್ನೆಟ್‌ ಸೇವೆ ಕಲ್ಪಿಸುತ್ತಿದೆ. ಅಲ್ಲದೆ ಪ್ರತೀ ಬಾರಿಯೂ ಹೊಸ ಹೊಸ ಆಫರ್‌ಗಳನ್ನು ನೀಡುತ್ತಿರುವ ಜಿಯೋ ಈಗ ಮತ್ತೊಂದು ಆಫರ್‌ ನೀಡಿದೆ.

ಹೌದು ಮೊದಲು ಜಿಯೋ ಟಿವಿ ಬಳಸುವವರು ಕೇವಲ ಮೊಬೈಲ್‌ನಲ್ಲಿ ಮಾತ್ರ ಅದನ್ನು ಬಳಸಲು ಅವಕಾಶವಿತು. ಇದರಿಂದಾಗಿ ಕಂಪ್ಯೂಟರ್‌ ಬಳಸುವವರಿಗೆ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ವೆಬ್‌ ವರ್ಷನ್‌ನಲ್ಲಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಜಿಯೋ ಟಿವಿಯನ್ನು ವೆಬ್‌ ವರ್ಷನ್‌ನಲ್ಲಿ ನೋಡುವ ಅವಕಾಶವನ್ನು ನೀಡಲಾಗಿದ್ದು, ಯಾವುದೇ ಬ್ರೌಸರ್‌ನಲ್ಲಿ ಜಿಯೋ ಟಿವಿಯಲ್ಲಿ ಲಾಗಿನ್ ಆಗಿ ಫ್ರೀಯಾಗಿ ಟಿವಿ ಕಾರ್ಯಕ್ರಮಗಳನ್ನ ನೋಡಬಹುದು.

jio.com ನಲ್ಲಿ ಲಾಗಿನ್‌ ಆಗಿ, ನಿಮ್ಮ ಜಿಯೋ ಐಡಿ ಮತ್ತು ಪಾಸ್‌ವರ್ಡ್‌ ಹಾಕಿ ಜಿಯೋ ಟಿವಿಯನ್ನು ನೋಡಬಹುದಾಗಿದೆ.

 

Leave a Reply

Your email address will not be published.