ಪಾಕಿಸ್ತಾನದಲ್ಲಿ ಕೊಹ್ಲಿ-ಅನುಷ್ಕಾ ಹನಿಮೂನ್..?! : ವೈರಲ್ photos ಹಿಂದಿನ ಸತ್ಯವೇನು..?

ಇತ್ತೀಚೆಗಷ್ಟೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ವಿವಾಹವಾಗಿದ್ದರು. ಮದುವೆಯ ಫೋಟೊಗಳು, ವೀಡಿಯೋಗಳು ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆನಂತರ ಹಿಮಚ್ಛಾದಿತ ಪ್ರದೇಶದಲ್ಲಿ ಹನಿಮೂನ್ ತೆರಳಿರುವ ಚಿತ್ರವೊಂದನ್ನು ಅನುಷ್ಕಾ ಪೋಸ್ಟ್ ಮಾಡಿದ್ದರು. ಇದು ಯಾವ ದೇಶ ಎಂದು ಇದುವರೆಗೂ ಖಚಿತವಾಗಿ ತಿಳಿದುಬಂದಿಲ್ಲ.

ನವವಿವಾಹಿತ ಜೋಡಿ ಮಧುಚಂದ್ರಕ್ಕೆ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿದ್ದಾರಾ..? ಖಂಡಿತ ಇಲ್ಲ. ಪಾಕಿಸ್ತಾನದ ಕೆಲ ತರಲೆ ಅಭಿಮಾನಿಗಳು ವಿರುಷ್ಕಾ ಜೋಡಿಯ ಹನಿಮೂನ್ ಫೋಟೊವನ್ನು  ಎಡಿಟ್ ಮಾಡಿದ್ದಾರೆ.  ಕೊಹ್ಲಿ ಅನುಷ್ಕಾ ಹನಿಮೂನ್ ಆಚರಿಸಲು ಪಾಕಿಸ್ತಾನಕ್ಕೇ ಹೋಗಿದ್ದಾರೆನೋ ಅನಿಸುವಂತೆ ಫೋಟೊಶಾಪ್ ಮಾಡಿ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ.

ಲಾಹೋರ್, ಕರಾಚಿ, ಇಸ್ಲಾಮಾಬಾದ್ ಪಾಕಿಸ್ತಾನದ ಕೆಲ ಪ್ರಸಿದ್ಧ ಪ್ರೇಕ್ಷಣೀಯ ತಾಣಗಳನ್ನು ಹಿನ್ನೆಲೆಯಲ್ಲಿ ಬರುವಂತೆ ಎಡಿಟ್ ಮಾಡಲಾಗಿರುವ ಈ ಚಿತ್ರಗಳ ವೈರಲ್ ಆಗಿದ್ದು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿವೆ.

 

 

 

 

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com