ಮಂಗಳೂರಿನಲ್ಲಿ ಮೋದಿ : BJP ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ

ಮಂಗಳೂರು : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಗೆದ್ದ ಬಳಿಕ ಮೋದಿ ಕರ್ನಾಟಕದತ್ತ ಮುಖ ಮಾಡಿದ್ದು,  ಓಖಿ ಚಂಡಮಾರುತದಿಂದ ಹಾನಿಗೊಳಗಾದ ಲಕ್ಷದ್ವೀಪ ಪ್ರದೇಶಗಳ ವೀಕ್ಷಣೆಗಾಗಿ ಪ್ರಧಾನಿ ಮೋದಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಮೋದಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ.

ವಿಶೇಷ ವಿಮಾನದಿಂದ ಮೋದಿ ಹೊರಬರುತ್ತಿದ್ದಂತೆ ಮಂಗಳೂರು ರಾಜ್ಯ ಸಚಿವ ಪಿ, ರಾಧಾಕೃಷ್ಣ್‌, ಸಂಸದ ನಳೀನ್‌ ಕುಮಾರ್‌ ಕಟೀಲ್, ಜಲ್ಲಾ ಪಂಚಾಯಿತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಸೇರಿದಂತೆ ಅನೇಕರು ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದ್ದಾರೆ.

ಮೋದಿ ಆಗಮಿಸುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದ ಹಿನ್ನೆಲೆಯಲ್ಲಿ ಮೋದಿಯವರನ್ನು ನೋಡಲು ಸಾವಿರಾರು ಮಂದಿ ವಿಮಾನ ನಿಲ್ದಾಣದ ಸುತ್ತಮುತ್ತ ಜಮಾಯಿಸಿದ್ದರು. ಭಾರೀ ಜನಸ್ತೋಮವನ್ನು ಕಂಡು ಅಲ್ಲೇ ವಾಹನ ನಿಲ್ಲಿಸಿ ಜನರತ್ತ ಮೋದಿ ಕೈ ಬೀಸಿದರು. ಮೋದಿ ಅವರ ಬಳಿ ಬರಲು ನೂಕು ನುಗ್ಗಾಟ ಪ್ರಾರಂಭವಾದಾಗ ಮೋದಿಯವರೇ ಜನರ ಬಳಿ ಬಂದರು.

ಬಳಿಕ ಮಂಗಳೂರಿಗರ ಅಭಿಮಾನವನ್ನು ಕುರಿತು ಮೋದಿ ಟ್ವೀಟ್ ಮಾಡಿದ್ದು, ಮಂಗಳೂರಿನಲ್ಲಿ ಅಭೂತಪೂರ್ವ ಸ್ವಾಗತ ಕೋರಿದ ಮಂಗಳೂರಿನ ಜನತೆಗೆ ಧನ್ಯವಾದಗಳು ಎಂದಿದ್ದಾರೆ

Leave a Reply

Your email address will not be published.

Social Media Auto Publish Powered By : XYZScripts.com