ಕ್ರಿಸ್ಮಸ್ ಆಚರಿಸಿದ್ರೆ ಪರಿಣಾಮ ಎದುರಿಸ್ಬೇಕಾಗುತ್ತೆ : ಉ.ಪ್ರ ಶಾಲೆಗಳಿಗೆ ಹಿಂದೂ ವೇದಿಕೆ ಎಚ್ಚರಿಕೆ

ಲಖನೌ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಶಾಲೆಗಳಿಗೆ ಕ್ರಿಸ್‌ ಮಸ್‌ ಆಚರಿಸದಂತೆ ಸೂಚನೆ ನೀಡಲಾಗಿದೆ. ಅಲಿಗಢದಲ್ಲಿ ಹಿಂದೂ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಕ್ರಿಸ್ ಮಸ್‌ ಆಚರಣೆ ಮಾಡದಂತೆ ಹಿಂದೂ ಜಾಗರಣ ವೇದಿಕೆ ಪತ್ರ ಬರೆದಿದೆ. ಅಲ್ಲದೆ ಒಂದು ವೇಳೆ ಆಚರಿಸಿದರೆ ಆಗುವ ತೊಂದರೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎಂಬ ಬೆದರಿಕೆ ಹಾಕಿದೆ.

ಈ ಬಗ್ಗೆ ಯೋಗಿ ಆದಿತ್ಯನಾಥ್‌ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ, ಜಾಣ ಕುರುಡುತನವನ್ನು ಪ್ರದರ್ಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೆಲ ದಿನಗಳ ಹಿಂದಷ್ಟೇ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಪೊಲೀಸ್‌ ಸ್ಟೇಷನ್‌ ಹೊರಗೆ ಭಜರಂಗದಳ ಕಾರ್ಯಕರ್ತರು ಕ್ರೈಸ್ತ ಪಾದ್ರಿಯೊಬ್ಬರ ಕಾರಿಗೆ ಬೆಂಕಿ ಹಚ್ಚಿದ್ದರು. ಮತಾಂತರದ ಉದ್ದೇಶದಿಂದ ಮಕ್ಕಳು ಕ್ಯಾರೋಲ್‌ ಹಾಡುವಂತೆ ಮಾಡಲಾಗುತ್ತಿದೆ ಎಂದು ಕ್ರಿಸ್ತರ ವಿರುದ್ಧ ಬೆದರಿಕೆ ಹಾಕಲಾಗಿತ್ತು.

ಇಷ್ಟಾದರೂ ಯೋಗಿ ಆದಿತ್ಯನಾಥ್ ಸರ್ಕಾರ ಗೊತ್ತಿದ್ದೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎಂದು ಅನೇಕರು ಟೀಕೆ ಮಾಡಿದ್ದರೆ. ಇಲ್ಲ ಯೋಗಿ ಸರ್ಕಾರ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com