ಇಲ್ಲಿ ಪೊಲೀಸರು ಇಲ್ಲದೇ ಇದ್ದಿದ್ರೆ ನಮ್ಮ ಕೈಯಲ್ಲಿ ತಲ್ವಾರ್ ಇರ್ತಿತ್ತು ; RSS ಮುಖಂಡ

ಹುಬ್ಬಳ್ಳಿ : ಒಂದು ವೇಳೆ ಇಲ್ಲಿ ಪೊಲೀಸರು ಇರದೇ ಇದ್ದರೆ ನಮ್ಮ ಕೈನಲ್ಲಿ ಧ್ವಜದ ಬದಲು ಕತ್ತಿ ಇರುತ್ತಿತ್ತು ಎಂದು ಆರ್‌ಎಸ್‌ಎಸ್‌ ಮುಖಂಡ ರಘುನಂದನ್‌ ಹೇಳಿದ್ದು, ವಿವಾದ ಸೃಷ್ಠಿಯಾಗಿದೆ.

ಹುಬ್ಬಳ್ಳಿಯಲ್ಲಿಂದು ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈಗ ಇಲ್ಲಿ ಪೊಲೀಸರು ಇಲ್ಲದೇ ಇದ್ದಿದ್ದರೆ ನಮ್ಮ ಕೈನಲ್ಲಿ ತಲ್ವಾರ್‌ ಇರುತ್ತಿತ್ತು. ಇಲ್ಲವೇ ಕಲ್ಲುಗಳಿರುತ್ತಿದ್ದವು. ಆಗ ಇಲ್ಲಿರುವ ಯಾವ ಬಿಲ್ಡಿಂಗ್‌ಗಳೂ, ಗ್ಲಾಸ್‌ಗಳೂ ಇರುತ್ತಿರಲಿಲ್ಲ. ನಮಗೆ ಪೊಲೀಸರ ಲಾಠಿಯ ಮೇಲೆ ನಂಬಿಕೆ ಇದೆ. ಆದ್ದರಿಂದ ನಾವು ಇನ್ನೂ ಕಲ್ಲನ್ನು ಕೈಗೆ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಪೊಲೀಸರು ನಂಬಿಕಸ್ಥರಾಗಿರಬೇಕು. ಅವರು ಯೋಗ್ಯವಾಗಿ ನಡೆದುಕೊಂಡರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ. ಪೊಲೀಸರ ಕೈಯಲ್ಲಿರೋ ಲಾಠಿ ಹಾಗೂ ಅವರ ಮನಸ್ಸಿನಲ್ಲಿ ದೇಶ ಭಕ್ತಿಯಿದೆ. ಅದರ ಮೇಲೆ ಅದ್ಯಾಕೋ ನಮಗೆ ನಂಬಿಕೆ ಇದೆ. ನಮಗಿರುವ ನಂಬಿಕೆಯನ್ನು ಪೊಲೀಸರು ಹುಸಿ ಮಾಡಬಾರದು ಎಂದಿದ್ದಾರೆ.

ಇದುವರೆಗೂ ಹಿಂದೂ ಸಮಾಜ ಸಭ್ಯವಾಗಿ ಉಳಿದುಕೊಂಡು ಬಂದಿದೆ. ನಾವೆಂದೂ ಪೊಲೀಸರ ಎದುರು ನಿಂತಿಲ್ಲ. ಆದರೆ ಯಾಕೋ ಇತ್ತೀಚೆಗೆ ಪೊಲೀಸರು ಕಾಂಗ್ರೆಸ್ ಪರವಾಗಿದ್ದಾರಾ ಎನಿಸುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com