‘ ನನ್ನನ್ನು ಕೊಹ್ಲಿಯೊಂದಿಗೆ ಹೋಲಿಸಬೇಡಿ ‘ : ಪಾಕ್ ಬ್ಯಾಟ್ಸಮನ್ ಹೀಗೆ ಹೇಳಿದ್ದೇಕೆ..?

ಕ್ರಿಕೆಟ್ ಕ್ಷೇತ್ರದಲ್ಲಿ ಇಬ್ಬರು ಶ್ರೇಷ್ಟ ಆಟಗಾರರ ಮಧ್ಯೆ ಹೋಲಿಕೆ ಮಾಡಿನೋಡುವುದು ಸರ್ವೇ ಸಾಮಾನ್ಯ. ಸಚಿನ್ – ಲಾರಾ, ವಾರ್ನ್ ಮುರಳಿಧರನ್, ಬ್ರೆಟ್ ಲೀ, ಶೋಯೆಬ್ ಅಖ್ತರ್ ಇಂತಹ ಆಟಗಾರರನ್ನು ಹೋಲಿಸಿ, ಇಬ್ಬರಲ್ಲಿ ಯಾರು ಶ್ರೇಷ್ಟ ಎಂಬ ಚರ್ಚೆಗಳು ಅಭಿಮಾನಿಗಳಲ್ಲಿ ನಡೆಯುತ್ತಲೆ ಇರುತ್ತವೆ. ಈಗಿನ ದಿನಮಾನಗಳಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮಧ್ಯೆ ಹೋಲಿಕೆ ಜಾರಿಯಲ್ಲಿದೆ.

ಕಳೆದ ವರ್ಷ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಆರ್ಥರ್ ‘ ಪಾಕ್ ಬ್ಯಾಟ್ಸಮನ್ ಬಾಬರ್ ಆಜಮ್ ಅವರನ್ನು ನೋಡಿದರೆ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ನೆನಪಾಗುತ್ತದೆ ‘ ಎಂದು ಹೇಳಿದ್ದರು.

Image result for babar azam kohli

ಈ ಹೇಳಿಕೆಯ ಬಗ್ಗೆ ಸ್ವತಃ ಬಾಬರ್ ಅಜಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ ಕೋಚ್ ಮಿಕಿ ಆರ್ಥರ್ ನನ್ನನ್ನು ತುಂಬ ದೊಡ್ಡ ಆಟಗಾರನೊಂದಿಗೆ ಹೋಲಿಸಿದ್ದಾರೆ. ಹೀಗೆಲ್ಲ ಮಾಡಬಾರದು. ಆದರೆ ಅದು ಕೋಚ್ ಅವರ ವೈಯಕ್ತಿಕ ಆಲೋಚನೆ. ಕೊಹ್ಲಿ ಹಾಗೂ ನನ್ನ ವೃತ್ತಿಜೀವನದ ಪ್ರಾರಂಭದ ದಿನಗಳ ಅಂಕಿ ಅಂಶಗಳಲ್ಲಿ ಸ್ವಲ್ಪ ಮಟ್ಟಿಗೆ ಸಾಮ್ಯತೆ ಇರಬಹುದು. ಆದರೆ ಕೊಹ್ಲಿ ವಿಶ್ವದ ನಂ. 1 ಬ್ಯಾಟ್ಸಮನ್ ಆಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಪರವಾಗಿ ಉತ್ತಮ ಪ್ರದರ್ಶನ ಮಾಡಬೇಕೆಂಬ ಹಂಬಲವಿದೆ ‘ ಎಂದಿದ್ದಾರೆ.

Leave a Reply

Your email address will not be published.