Ranaji Cricket : ಮುನ್ನಡೆ ಸಾಧಿಸಿದ ವಿದರ್ಭ : ರೋಚಕ ಹಂತಕ್ಕೆ ಸೆಮಿಫೈನಲ್

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ವಿದರ್ಭ 76 ರನ್ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ವಿದರ್ಭ ತಂಡ 4 ವಿಕೆಟ್ ಕಳೆದುಕೊಂಡು 195 ರನ್ ಸೇರಿಸಿದೆ.

ವಿದರ್ಭ ಪರವಾಗಿ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಗಣೇಶ್ ಸತೀಶ್ 128 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಮತ್ತೋರ್ವ ಬ್ಯಾಟ್ಸಮನ್ ಅಕ್ಷಯ್ ವಿನೋದ್ ವಾಡ್ಕರ್ 19 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ನಾಯಕ ಫೈಜ್ ಫಜಲ್ ಶೂನ್ಯಕ್ಕೆ ಔಟಾದರೆ, ಮಿಂಚಿನ ಬ್ಯಾಟಿಂಗ್ ನಡೆಸಿದ ಅಪೂರ್ವ್ ವಾಂಖಡೆ 49 ರನ್ ಗಳಿಸಿ ಅರ್ಧಶತಕ ವಂಚಿತರಾದರು.

ಕರ್ನಾಟಕದ ಪರವಾಗಿ ಶ್ರೀನಾಥ್ ಅರವಿಂದ್ 2, ನಾಯಕ ವಿನಯ್ ಕುಮಾರ್ 1 ಹಾಗೂ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು. ನಾಲ್ಕನೇ ದಿನದ ಆಟ ಬಾಕಿಯಿದ್ದು ರೋಚಕ ಸೆಮಿಫೈನಲ್ ಪಂದ್ಯದ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಿದೆ.

Leave a Reply

Your email address will not be published.