Shocking : ಸಿನಿಮಾಗೆ ಸನ್ನಿ ಕೇಳಿರೋ ಸಂಭಾವನೆ ಕೇಳಿದ್ರೆ ತಲೆ ಗಿರ್ರ್ ಅನ್ನುತ್ತೆ….!!

ಬಾಲಿವುಡ್‌ನ ಮಾದಕ ನಟಿ ಸನ್ನಿ ಲಿಯೋನ್‌ ಬಹುಬೇಡಿಕೆಯ ನಟಿ ಎಂಬುದು ಎಲ್ಲರಿಗೂ ತಿಳಿದಿದೆ. ನೀಲಿ ತಾರೆ ಎಂದೇ ಕರೆಸಿಕೊಳ್ಳುವ ಸನ್ನಿ ಲಿಯೋನ್‌ಗೆ ಜನಪ್ರಿಯತೆ ಸಹ ಹೆಚ್ಚಿದೆ. ಇದೇ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ಸನ್ನಿ ಲಿಯೋನ್‌ ಸಿನಿಮಾಕ್ಕೆ ಭಾರೀ ಡಿಮ್ಯಾಂಡ್ ಮಾಡುತ್ತಿದ್ದಾರೆ.

ಹೌದು ಬಾಹುಬಲಿ ಖ್ಯಾತಿಯ ಅನುಷ್ಕಾಗಿಂತ ಇವರು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ 2.5 ಕೋಟಿ ಸಂಭಾವನೆ ಪಡೆದಿದ್ದರು. ಈಗ ಸನ್ನಿ ಸಹ ಅವರ ಒಂದು ಸಿನಿಮಾಗೆ 2.5 ಕೋಟಿ ಸಂಭಾವನೆ ಕೇಳಿದ್ದು, ತೆರಿಗೆ ಎಲ್ಲವೂ ಸೇರಿ ಅಂದಾಜು 3.5 ಕೋಟಿ ಕೊಡಬೇಕು ಎಂದು ಕಂಡೀಷನ್‌ ಹಾಕಿದ್ದಾರೆ.

ಸನ್ನಿ ಜಾಹೀರಾತುಗಳಲ್ಲಿ ಬಂದರೇ ಜನ ಮುಗಿಬಿದ್ದು ನೋಡುತ್ತಾರೆ. ಇನ್ನು ಸನ್ನಿ ಸಿನಿಮಾ ಎಂದರೆ ಬರದಿರಲು ಹೇಗೆ ಸಾಧ್ಯ ಎಂಬುದನ್ನು ನಿರ್ಮಾಪಕರು ಲೆಕ್ಕಾಚಾರ ಹಾಕಿದ್ದು, ಸನ್ನಿ ಡಿಮ್ಯಾಂಡ್‌ಗೆ ಒಕೆ ಎಂದಿದ್ದಾರೆ.

ಸದ್ಯದಲ್ಲೇ ಸನ್ನಿ ಲಿಯೋನ್‌ ಐತಿಹಾಸಿಕ ಚಿತ್ರವೊಂದನ್ನು ಮಾಡಲಿದ್ದು, ಈ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲವಂತೆ.

 

Leave a Reply

Your email address will not be published.

Social Media Auto Publish Powered By : XYZScripts.com