ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌ ಬಳಿ ಕೆಲಸ ಕೇಳಿದ ಕೋಟ್ಯಾಧಿಪತಿ ಮಾಡೆಲ್‌….?

ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಮಾಡೆಲ್‌ಗಳು ಸಾಮಾನ್ಯವಾಗಿ ಬಾಲಿವುಡ್‌ ಸ್ಟಾರ್‌ಗಳ ಬಳಿ ಆಫರ್‌ ಕೇಳಿಕೊಂಡು ಅಥವಾ ಕೆಲಸ ಕೇಳಿಕೊಂಡು ಬರುವುದು ಸಾಮಾನ್ಯ. ಅದೇ ರೀತಿ ಈ ಬಾರಿ ಸಹ ಅಂತಾರಾಷ್ಟ್ರೀಯ ಮಾಡೆಲ್‌ ಅಮೆಂಡಾ ಕರ್ನಿ ಸಹ ಬಾಲಿವುಡ್ ಸ್ಟಾರ್‌ಗಳಾದ ಸಲ್ಮಾನ್ ಖಾನ್‌ ಹಾಗೂ ಶಾರುಕ್‌ ಖಾನ್‌ ಹಾಗೂ ಕರಣ್‌ ಜೋಹರ್‌ ಅವರ ಬಳಿ ಕೆಲಸ ಕೇಳಿಕೊಂಡು ಬಂದಿದ್ದಾರೆ.

ತಮಗೆ ಕೆಲಸದ ಅಗತ್ಯವಿದೆ. ಆನ್‌ಲೈನ್‌ನಲ್ಲಿ ನನಗೆ ಏನಾದರೂ ಕೆಲಸ ನೀಡಿ ಎಂದು ಮನವಿ ಸಲ್ಲಿಸಿದ್ದಾಳಂತೆ. ಸದ್ಯ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ಸಲ್ಮಾನ್ ಖಾನ್‌ ಹಾಗೂ ಶಾರುಕ್‌ ಖಾನ್‌ಗೆ ತನ್ನ ಫೋಟೋವನ್ನೂ ಟ್ಯಾಗ್‌ ಮಾಡಿದ್ದಾಳೆ. ಕರ್ನಿ ಈಗಾಗಲೆ ಕಂಪನಿಯ ಸಿಇಒ ಹಾಗೂ ನಿರ್ದೇಶಕಿಯಾಗಿ ಮಾತ್ರವಲ್ಲ, ಯೂಟ್ಯೂಬ್‌ ಚಾನೆಲನ್ನೂ ನಡೆಸುತ್ತಿದ್ದಾರೆ. ಇದರ ಮುಖಾಂತರವೇ ಲಕ್ಷಾಂತರ ಮಂದಿ ಚಂದಾದಾರರನ್ನು ಹೊಂದಿದ್ದಾಳೆ.

ಈಕೆಗೆ ಇನ್ಸ್ಟಾಗ್ರಾಂನಲ್ಲಿ ಈಕೆಗೆ 1.5 ಕೋಟಿ ಮಂದಿ ಫಾಲೋವರ್ಸ್‌ ಹೊಂದಿದ್ದಾಳೆ. ಇಷ್ಟೆಲ್ಲಾ ಇರುವ ಈಕೆ ಬಾಲಿವುಡ್‌ ಸ್ಟಾರ್‌ಗಳ ಬಳಿ ಕೆಲಸ ಕೇಳಿರೋದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com