Bangaloreನಲ್ಲಿ ಗೇಟ್‌ ವೇ ಆಫ್‌ ಇಂಡಿಯಾ : ಕೇಕ್‌ ಶೋನಲ್ಲಿ ಜನರ ಮನಸೂರೆಗೊಂಡ ಪಾಂಡಾ

ಬೆಂಗಳೂರು : ಪ್ರತೀ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಕೇಕ್‌ ಶೋ ಏರ್ಪಡಿಸಲಾಗಿದ್ದು, ವಿವಿಧ ಬಗೆಯ ವಿನ್ಯಾಸಗಳಲ್ಲಿ ಮಾಡಿರುವ ಕೇಕ್‌ಗಳು ಜನರ ಮನಸೂರೆಗೊಳ್ಳುತ್ತಿದೆ.

ಇನ್ಸಿಟಿಟ್ಯೂಟ್‌ ಆಫ್‌ ಬೇಕಿಂಗ್‌ ಮತ್ತು ಕೇಕ್ ಆರ್ಟ್‌ ಸಂಸ್ಥೆಯ ಮನೀಶ್  ಗೌರ್‌ ಹಾಗೂ ಅವರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೇಕ್‌ ಶೋ ಏರ್ಪಡಿಸಲಾಗಿದ್ದು, ಮೂರು ತಿಂಗಳಿನಿಂದ  ಈ ತಂಡ ಪಟ್ಟ ಪರಿಶ್ರಮಕ್ಕೆ ಜನರು ಶಹಬ್ಬಾಶ್‌ ಹೇಳಿದ್ದಾರೆ.

ಡಿಸೆಂಬರ್‌ 15ರಿಂದ 2018ರ ಜನವರಿ 1ರವರೆಗೂ ಈ ಶೋ ಇರಲಿದ್ದು, ಕಂಠೀರವ ಕ್ರೀಡಾಂಗಣದ ಸಂತ ಜೋಸೆಫ್‌ ಇಂಡಿಯನ್‌ ಸ್ಕೂಲ್‌ ಬಳಿ ಶೋ ಏರ್ಪಡಿಸಲಾಗಿದ್ದು, ಕೇಕ್‌ ಪ್ರಿಯರು ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಕೇಕ್‌ ರುಚಿಯನ್ನು ಇಲ್ಲಿ ಸವಿಯಬಹುದು.

ಈ ಕೇಕ್‌ ಶೋ ನ ಪ್ರಮಖ ಆಕರ್ಷಣೆ ಎಂದರೆ ಮುಂಬೈನಲ್ಲಿರುವ ಗೇಟ್‌ ವೇ ಆಫ್‌ ಇಂಡಿಯಾ ಮಾದರಿಯ ಕೇಕ್‌.  75 ದಿನಗಳ ಕಾಲ ಐದು ಮಂದಿ ಸೇರಿ ಈ ಕೇಕನ್ನು ತಯಾರಿಸಿದ್ದಾರೆ. ಈ ಕೇಕ್‌ 1200 ಕೆ.ಜಿ ತೂಕವಿದ್ದು, 15 ಅಡಿ ಉದ್ದ, 5 ಅಡಿ ಅಗಲ, 11 ಅಡಿ ಎತ್ತರವಿದ್ದು, ಸಕ್ಕರ ಹಾಗೂ ರಾಯಲ್‌ ಐಸಿಂಗ್ ಬಳಸಿ ತಯಾರಿಸಲಾಗಿದೆ.

ಈ ಬಾರಿಯ ಕೇಕ್ ಶೋನ ವಿಶೇಷತೆ ಎಂದರೆ ರಾಜವಂಶಸ್ಥರು ಬಳಸುತ್ತಿದ್ದ ಹಾಗೂ ಮದುವೆಯಲ್ಲಿ ಬಳಸಲಾಗುತ್ತಿದ್ದ ಡೋಲಿ  ಅಥವಾ ಪಲ್ಲಕ್ಕಿ ಜನರ ಕಣ್ಮನ ಸೆಳೆದಿದ್ದು, ಕೇಕ್‌ನಿಂದ ತಯಾರಿಸಿದ ಈ ಡೋಲಿ ಬರೋಬ್ಬರಿ 145 ಕೆ.ಜಿ ಕೇಕ್‌ನಿಂದ ತಯಾರಿಸಲಾಗಿದೆ. 6 ಅಡಿ ಎತ್ತರ, 5 ಅಡಿ ಉದ್ದ, 4 ಅಡಿ ಅಗಲವಿರುವ ಕೇಕನ್ನು 21 ದಿನಗಳಲ್ಲಿ ತಯಾರಿಸಲಾಗಿದೆ.

ಅಷ್ಟೇ ಅಲ್ಲದೆ ಐಫೆಲ್‌ ಟವರ್‌, ಪಾಂಡಾ, ಡೈನೋಸಾರ್‌, ಟೀ ಪಾಟ್‌, ಮತ್ಸ್ಯಕನ್ಯೆ, ಆ್ಯಂಗ್ರಿ ಬರ್ಡ್‌, ವೇಫರ್‌ ಪರಿಕಲ್ಪನೆಯ ಮದುವೆಯ ಕೇಕ್‌, ಸ್ಕೂಟರ್‌, ಸೆಲ್ಫೀ ಸೇರಿದಂತೆ ಅನೇಕ ಬಗೆಯ ಕೇಕ್‌ಗಳನ್ನು ಪ್ರಸ್ತುತಪಡಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com