ಗುಜರಾತ್‌ನಲ್ಲಿ ನಾವು ಗೆಲ್ಲದೇ ಇರಬಹುದು, ಆದರೆ BJPಗೆ ತಕ್ಕ ಪಾಠ ಕಲಿಸಿದ್ದೇವೆ : ರಾ.ಗಾ

ಅಹಮದಾಬಾದ್ : ಗುಜರಾತ್‌ ಚುನಾವಣೆಯಲ್ಲಿ ನಾವು ಗೆಲ್ಲದೇ ಇರಬಹುದು. ಆದರೆ ಬಿಜೆಪಿಗೆ ಸಮಬಲದ ಪೈಪೋಟಿ ನೀಡಿ ದೊಡ್ಡ ಹೊಡೆತವನ್ನೇ ನೀಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.
ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಬಳಿಕ ಮೊದಲ ಬಾರಿಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿ, ಗುಜರಾತ್‌ನಲ್ಲಿ ಮೋದಿ ಹವಾ ಕಡಿಮೆಯಾಗಿದೆ ಎಂಬುದು ಈ ಚುನಾವಣೆಯಿಂದಲೇ ತಿಳಿಯುತ್ತದೆ. ಮೋದಿ ತಂಡಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ. ನಾವ ಸೋತು ಗೆದ್ದಿದ್ದೇವೆ. ಮೋದಿ ಗೆದ್ದು ಸೋತಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಅವರ ಗುಜರಾತ್‌ ಮಾದರಿ ಏನೆಂಬುದು ಚುನಾವಣಾ ಫಲಿತಾಂಶದಿಂದ ಗೊತ್ತಾಗುತ್ತಿದೆ. ಬಿಜೆಪಿ ಸರ್ಕಾರದ ಬಗ್ಗೆ ಇರುವ ಆಕ್ರೋಶವನ್ನು ಜನ ಈ ಮೂಲಕ ಹೊರಹಾಕಿರುವುದಾಗಿ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ಬಿಜೆಪಿ ವಿರುದ್ಧ ಸಮರ ಸಾರಿದ್ದರು. ಅದರ ಪರಿಣಾಮ ಗುಜರಾತ್‌ ಜನರ ಮನಸ್ಸಲ್ಲಿ ಕಾಂಗ್ರೆಸ್ ಉಳಿಯುವಂತೆ ಮಾಡಿತು ಎಂದಿರುವ ರಾಹುಲ್ ಗಾಂಧಿ, ಬಿಜೆಪಿ ಪತನದ ಆರಂಭ ಶುರುವಾಗಿದೆ ಎಂದಿದ್ದಾರೆ.
 ಗುಜರಾತ್‌ನಲ್ಲಿ ನಾವು ಸೋತರೂ ನಮಗೆ ನಿರಾಸೆಯಾಗಿಲ್ಲ. ರಾಜ್ಯದ ಕಾರ್ಯಕರ್ತರ ಶ್ರಮ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಶಾಲಿಯಾಗಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com