Health Tips : ಎಲೆ ಸೀಕ್ರೆಟ್..!! ಸರ್ವ ರೋಗಕ್ಕೂ ಈ ಎಲೆಯೇ ಉಪಕಾರಿ..!!

 

ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸೀಬೆ(ಪೇರಲೆ) ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರುಚಿಕರವಾದ ಸೀಬೆ ಹಣ್ಣು ಅಥವಾ ಸೀಬೆ ಕಾಯಿಗಳನ್ನು ನಾವು ತಿನ್ನುತ್ತೇವೆ. ಆದರೆ, ಸೀಬೆ ಎಲೆಗಳ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ಅವುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡಿದ್ದೀರಾ? ಈ ಎಲೆಗಳಲ್ಲಿ ,ಹಲವು ರೋಗಗಳನ್ನು ಗುಣಪಡಿಸಲು ಬೇಕಾಗುವ Anti Oxidentಗಳು ಹೇರಳವಾಗಿವೆ. ಹೇಳಬೇಕೆಂದರೆ, ಸೀಬೆ ಕಾಯಿಗಿಂತಲೂ ಎಲೆಗಳಲ್ಲಿ ಹೆಚ್ಚು ಪ್ರಯೋಜನಕಾರಿ ಅಂಶಗಳಿವೆಯೆಂದು ಆಹಾರ ತಜ್ಞರು ಹೇಳುತ್ತಾರೆ.

 

ಸೀಬೆ ಎಲೆಗಳಲ್ಲಿ ನೋವು ಹಾಗೂ ಬಾವುಗಳನ್ನು ಗುಣಪಡಿಸುವ ಗುಣಗಳು ಹೆಚ್ಚಾಗಿವೆ  ಸೀಬೆ ಎಲೆಗಳ ಟೀ ಕುಡಿದರೆ,ಶ್ವಾಸ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ನೆಗಡಿ,ಕೆಮ್ಮು ಹತೋಟಿಗೆ ಬರುತ್ತವೆ. ಚೆನ್ನಾಗಿ ತೊಳೆದ ಎಲೆಗಳನ್ನು ಜಗಿಯುವುದರಿಂದ ಹಲ್ಲಿನ ನೋವು ದೂರವಾಗುತ್ತದೆ. ವಸಡುಗಳ ಊತ, ಬಾಯಿ ಹುಣ್ಣು ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿಗೆ ಮುಖ್ಯವಾದ ಕಾರಣ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ. ಎಲೆಗಳಲ್ಲಿರುವ ಕ್ವರ್ಸಿಟಿನ್,ಫ್ಲಾವನೋಲ್ ಎಂಬ ಶರೀರಕ್ಕೆ ಉಪಯುಕ್ತವಾದ ಫ್ಲಾವನಾಯಿಡ್ ಗಳು ಇದರಲ್ಲಿ ಪುಷ್ಕಳವಾಗಿವೆ.

ಸೀಬೆ ಎಲೆ ಹಾಗೂ ತೊಗಟೆಯಿಂದ ತಯಾರಿಸಿದ ಪದಾರ್ಥಗಳು ಕ್ಯಾನ್ಸರ್, ಬ್ಯಾಕ್ಟೀರಿಯಾಗಳಿಂದ ಬರುವ ಅಂಟುರೋಗಗಳು , ಬಾವು ಮತ್ತು ನೋವುನಿವಾರಿಸುತ್ತದೆ. ಸೀಬೆ ಎಲೆಗಳಿಂದ ತಯಾರಿಸಲಾದ ಎಣ್ಣೆ ಕ್ಯಾನ್ಸರ್ ಗೆ ವಿರುದ್ಧವಾಗಿ ಕೆಲಸಮಾಡುತ್ತದೆ. ಸೀಬೆ ಎಲೆಗಳನ್ನು ಡಯೇರಿಯಾಗೆ ನಾಟೀ ಔಷದವಾಗಿ ಉಪಯೋಗಿಸುತ್ತಾರೆ. ತೊಗಟೆ ಆಂಟಿ ಮೈಕ್ರೋಬಿಯಲ್, ಆಸ್ಟ್ರಿಂಜೆಂಟ್ ಗುಣಗಳನ್ನು ಹೊಂದಿದೆ. ಸಕ್ಕರೆ ವ್ಯಾಧಿ ನಿವಾರಣೆಯಲ್ಲೂ ಎಲೆಗಳನ್ನು ಉಪಯೋಗಿಸುತ್ತಾರೆ. ಕೆಲವು ದೇಶಗಳಲ್ಲಿ , ಸೀಬೆ ಹಣ್ಣಿನ ಸಿಪ್ಪೆತೆಗೆದು ಸಕ್ಕರೆ ಪಾಕದಲ್ಲಿ ಅದ್ದಿ,ಕೆಂಪು ಬಣ್ಣ ಹಾಕಿ, ರೆಡ್ ಗ್ವಾವಾ ಎಂಬ ಹೆಸರಿನಲ್ಲಿ ಮಾರಾಟಮಾಡುತ್ತಾರೆ. ಎಲೆಗಳನ್ನು ಟೀ ರೂಪದಲ್ಲಿ ಸೇವಿಸದರೆ ಹೆಚ್ಚು ಪರಿಣಾಮಕಾರಿ.

ಸೀಬೆ ಎಲೆಗಳ ಟೀ ತಯಾರಿಸುವ ವಿಧಾನ :

ಚೆನ್ನಾಗಿ ತೊಳೆದ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಆರಿಸಿದರೆ ಟೀ ತಯಾರಾಗುತ್ತದೆ.ಇದಕ್ಕೆ ಸ್ವಲ್ಪ ಸಕ್ಕರೆ ಅಥವಾ ಜೇನನ್ನು ಸೇರಿಸಿ ಕುಡಿದರೆ, ರಕ್ತದಲ್ಲಿರುವ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಪೋಷಕಾಂಶಗಳು ತೂಕವನ್ನು ಕಡಿಮೆಮಾಡುವ ಗುಣಗಳನ್ನು ಹೊಂದಿವೆ. ಕೆಟ್ಟ ಕೊಲೆಸ್ಟ್ರಾಲ್ ಇರುವವರು ಈ ಟೀ ಯನ್ನು ತಿಂಗಳಿಗೆ ಒಂದು ಸಲ ಕುಡಿದರೂ ಒಳ್ಳೆಯ ಫಲಿತಾಂಶ ಕಾಣುತ್ತದೆ.

ತೂಕ ಕಡಿಮೆಮಾಡಲು : ಸೀಬೆ ಎಲೆಗಳಲ್ಲಿ,ಕೊಬ್ಬು,ಕ್ಯಾಲರಿಗಳು ಕಡಿಮೆಯಿರುತ್ತವೆ. ಆದುದರಿಂದ  ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಯಸುವವರಿಗೆ ಇದೊಂದು ಅತ್ಯತ್ತಮ ಔಷಧ. ಎಲೆಗಳಿಂದ ತೆಗೆದ ರಸವನ್ನು ಸೇವಿಸುವುದರಿಂದ ತೂಕ ಕಡಿಮೆಮಾಡಿಕೊಳ್ಳಬಹುದು ಪೋಷಕಾಂಶಗಳು,ವಿಟಮಿನ್ನುಗಳು,ನಾರು ಪದಾರ್ಥ ಹೆಚ್ಚಾಗಿರುವುದರಿಂದ ಸಕ್ಕರೆ ವ್ಯಾಧಿ ಇರುವವರಿಗೆ ಒಳ್ಳೆಯದು.

ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ: ಸೀಬೆ ಹಣ್ಣಿನ ಜ್ಯೂಸ್ ಲಿವರ್ ಗೆ ಒಂದೊಳ್ಳೆಯ ಟಾನಿಕ್. ಈ ಜ್ಯೂಸನ್ನು ಕುಡಿದರೆ ಎಂತಹ ಅಡ್ಡಪರಿಣಾಮಗಳು ಇಲ್ಲದೆ ಬ್ಲಡ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಸಕ್ಕರೆ ಕಾಯಿಲೆ ನಿವಾರಣೆಗೆ : ನಿಮ್ಮ ಕುಟುಂಬ ದಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆಯಿದ್ದಲ್ಲಿ ಸೀಬೆ ಎಲೆಗಳ ಟೀ ಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ,ರಕ್ತದಲ್ಲಿ ಸಕ್ಕರೆ ಅಂಶ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ಸುಲಿನ್ ಉತ್ಪತ್ತಿಮಾಡದೆಯೇ ಸಕ್ಕರೆ ಅಂಶವನ್ನು ಕಡಿಮೆಗೊಳಿಸುತ್ತದೆ.

ಡಯೇರಿಯಾ : ಸೀಬೆ ಗಿಡದ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಸೇವಿಸಿದರೆ, ಡಯೇರಿಯಾ ಹಾಗೂ ಹೊಟ್ಟೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:ಸೀಬೆ ಎಲೆಗಳ ಟೀ ಯನ್ನು ನಿಯಮಿತವಾಗಿ ಸೇವಿಸಿದರೆ, ಜೀರ್ಣಕ್ರಿಯೆಗೆ ಸಹಾಯವಾಗುವ ರಸವನ್ನು ಉತ್ಪತ್ತಿಮಾಡಲು ಸಹಕಾರಿಯಾಗುತ್ತದೆ. ಇದರಿಂದ ಫುಡ್ ಪಾಯಿಜನ್ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

 

ಹಲ್ಲುಗಳ ಸಮಸ್ಯೆ :
ಎಲೆಗಳನ್ನು ಜಗಿಯುವುದರಿಂದ ಹಲ್ಲುನೋವು ಕಡಿಮೆಯಾಗುವುದಲ್ಲದೆ, ಗಂಟಲು ನೋವು,ವಸಡಿನ ವ್ಯಾಧಿಗಳು ಕಡಿಮೆಯಾಗುತ್ತವೆ. ಹಸಿವು ಹೆಚ್ಚಾಗುತ್ತದೆ. ಎಲೆಗಳನ್ನು ನುಣ್ಣಗೆ ರುಬ್ಬಿಕೊಂಡು ಹಲ್ಲು ಹಾಗು ವಸಡುಗಳ ಮೇಲೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.

ಪ್ರೋಸ್ಟ್ರೇಟ್ ಕ್ಯಾನ್ಸರ್ :
ಸೀಬೆ ಎಲೆಗಳ ಜ್ಯೂಸ್ ಕುಡಿದರೆ,ಪ್ರೋಸ್ಟ್ರೇಟ್ ಕ್ಯಾನ್ಸರ್ ಮತ್ತು ಪ್ರೋಸ್ಟ್ರೇಟ್ ಗ್ರಂಥಿ ದೊಡ್ಡದಾಗುವುದನ್ನು ತಡೆಯಬಹುದು.ಸೀಬೆ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ, ವೀರ್ಯಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ.

ಅಲರ್ಜಿ ನಿವಾರಣೆಯಾಗುತ್ತದೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಉಂಟಾಗುವ ಅಲರ್ಜಿಯನ್ನು ಬಹಳ ಚೆನ್ನಾಗಿ ನಿವಾರಿಸುತ್ತದೆ.

One thought on “Health Tips : ಎಲೆ ಸೀಕ್ರೆಟ್..!! ಸರ್ವ ರೋಗಕ್ಕೂ ಈ ಎಲೆಯೇ ಉಪಕಾರಿ..!!

 • February 8, 2018 at 7:22 PM
  Permalink

  Due to it relatively unspoiled offerings, Vietnam offers great destinations you can use
  to either open or preface your Southeast Asian jaunt or close one.
  Being an Indian, you can select any place for a vacation, but if you are worried about your budget as
  well as the hassle over the entire trip, it is wise to go for India tour packages.
  The island is additionally a home for eminent caverns that you can investigate and will really flabbergast you with the masterful game plan of the stalactites and stalagmites.

  Reply

Leave a Reply

Your email address will not be published.

Social Media Auto Publish Powered By : XYZScripts.com