ಮಾಜಿ ಬಾಕ್ಸರ್ ಕೌರ್ ಸಿಂಗ್ ಅಸ್ವಸ್ಥ : KKR ವತಿಯಿಂದ ಚಿಕಿತ್ಸೆಗೆ 5 ಲಕ್ಷ ನೀಡಿದ ಶಾರುಖ್..!

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಬಾಕ್ಸರ್ ಕೌರ್ ಸಿಂಗ್ ಅವರ ಚಿಕಿತ್ಸೆಗಾಗಿ ಬಾಲಿವುಡ್ ನಟ ಶಾರುಖ್ ಖಾನ್ 5 ಲಕ್ಷ ರೂ. ಧನಸಹಾಯ ಮಾಡಿದ್ದಾರೆ. ‘ ಕ್ರೀಡಾಪಟುಗಳು ನಮ್ಮ ದೇಶಕ್ಕೆ ಗೌರವವನ್ನು ತರುತ್ತಾರೆ. ಅವರನ್ನು ಸರಿಯಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ‘ ಎಂದು ಶಾರುಖ್ ಹೇಳಿದ್ದಾರೆ.

Image result for shahrukh khan kaur singh

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಕೌರ್ ಸಿಂಗ್, ಚಿಕಿತ್ಸೆಯ ನಂತರ 2 ಲಕ್ಷ ರೂ. ಬಿಲ್ ಕಟ್ಟಲು ಆಗದೇ ಸಂಕಷ್ಟದಲ್ಲಿದ್ದರು. ಮಾಧ್ಯಮಗಳಿಂದ ಈ ವಿಷಯ ತಿಳಿದ ನಂತರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ 2 ಲಕ್ಷ ರೂಪಾಯಿಯ ಚೆಕ್ ಕಳಿಸಿದ್ದರು. ಈಗ ಶಾರುಖ್ ಖಾನ್ 5 ಲಕ್ಷ ರೂ ನೀಡಿ ಸಹಾಯ ಮಾಡಿದ್ದಾರೆ. ಕೌರ್ ಸಿಂಗ್ ಅವರ ಚಿಕಿತ್ಸೆಗೆ ಪ್ರತಿ ತಿಂಗಳಿಗೆ 8000 ರೂಪಾಯಿಗಳ ಅಗತ್ಯವಿದೆ.

ಕೌರ್ ಸಿಂಗ್, ಮಹಾನ್ ಬಾಕ್ಸಿಂಗ್ ಕ್ರೀಡಾಪಟು ಮಹಮ್ಮದ್ ಅಲಿಯನ್ನು ರಿಂಗ್ ನಲ್ಲಿ ಎದುರಿಸಿದ ಏಕೈಕ ಭಾರತೀಯ ಬಾಕ್ಸರ್ ಆಗಿದ್ದಾರೆ. 1982 ರಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಕೌರ್ ಸಿಂಗ್ ಚಿನ್ನದ ಪದಕವನ್ನೂ ಗೆದ್ದಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com