Ranaji Semifinal : ಕರುಣ್ ನಾಯರ್ ಶತಕ : ಮುನ್ನಡೆ ಸಾಧಿಸಿದ ಕರ್ನಾಟಕ

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 298 ರನ್ ಸೇರಿಸಿರುವ ಕರ್ನಾಟಕ 109 ರನ್ ಮುನ್ನಡೆ ಪಡೆದುಕೊಂಡಿದೆ.

ಕರ್ನಾಟಕದ ಪರವಾಗಿ ಅಮೋಘ ಶತಕ ಬಾರಿಸಿದ ಕರುಣ್ ನಾಯರ್ 148 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. 261 ಎಸೆತಗಳನ್ನೆದುರಿಸಿದ ಕರುಣ್ ನಾಯರ್ 20 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಕರುಣ್ ನಾಯರ್ಗೆ ಉತ್ತಮ ಸಾಥ್ ನೀಡಿದ ನಾಯಕ ವಿನಯ್ ಕುಮಾರ್ (20*) ನಾಟೌಟ್ ಆಗಿ ಉಳಿದಿದ್ದಾರೆ. ವಿದರ್ಭ ಪರವಾಗಿ ರಜನೀಶ್ ಗುರ್ಬಾನಿ 5, ಉಮೇಶ್ ಯಾದವ್ 2 ಹಾಗೂ ಆದಿತ್ಯ ಸರ್ವಾಟೆ 1 ವಿಕೆಟ್ ಪಡೆದರು.

Leave a Reply

Your email address will not be published.