WATCH : ಲಂಚ ಸ್ವೀಕಾರ : ACB ಅಧಿಕಾರಿಗಳ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್‌ ವೆಂಕಟಾಚಲಪತಿ

ಬೆಂಗಳೂರು : ಕಂದಾಯ ಭವನದಲ್ಲಿ‌ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ವಿಶೇಷ ತಹಶೀಲ್ದಾರ್‌ ವಂಕಟಾಚಲಪತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ  ಡಿಎಸ್‌ಪಿ ಬಾಲರಾಜ್‌ ನೇತೃತ್ವದಲ್ಲಿ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

ಮಂಜುನಾಥ್‌ ಎಂಬುವವರ ಜಮೀನಿಗೆ ಸಂಬಂಧಿಸಿದಂತೆ ಅವರಿಗೆ ಅನುಕೂಲ ಮಾಡಿಕೊಡಲು ವೆಂಕಟಾಚಲಪತಿ 15 ಲಕ್ಷಕ್ಕಾಗಿ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿಂದು 5 ಲಕ್ಷ ಅಡ್ವಾನ್ಸ್‌ ಪಡೆಯುವ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಸದ್ಯ ಕಂದಾಯಭವನದಲ್ಲಿರುವ ಅವರ ಕಚೇರಿಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ವೆಂಕಟಾಚಲಪತಿಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

 

One thought on “WATCH : ಲಂಚ ಸ್ವೀಕಾರ : ACB ಅಧಿಕಾರಿಗಳ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್‌ ವೆಂಕಟಾಚಲಪತಿ

  • December 25, 2017 at 7:35 AM
    Permalink

    Good day very nice site!! Man .. Beautiful .. Superb .. I will bookmark your site and take the feeds also? I am happy to seek out so many useful information here in the put up, we need develop extra techniques in this regard, thank you for sharing. . . . . .

    Reply

Leave a Reply

Your email address will not be published.

Social Media Auto Publish Powered By : XYZScripts.com