ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್ಷಿಪ್ : ಚಿನ್ನ ಗೆದ್ದ ಸುಶೀಲ್ ಕುಮಾರ್, ಸಾಕ್ಷಿ ಮಲಿಕ್

ಸೌತ್ ಆಫ್ರಿಕಾದ ಜೋಹಾನೆಸ್ ಬರ್ಗ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ಭಾರತದ ಸುಶೀಲ್ ಕುಮಾರ್ ಹಾಗೂ ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ.

ಪುರುಷರ 74 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ಫೈನಲ್ ನಲ್ಲಿ ಸುಶೀಲ್ ಕುಮಾರ್ ನ್ಯೂಜಿಲೆಂಡಿನ ಆಕಾಶ್ ಖುಲ್ಲರ್ ಅವರನ್ನು ಪಿನ್ ಫಾಲ್ ಮೂಲಕ ಮಣಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸುಶೀಲ್ ಕುಮಾರ್ 2008 ರ ಬೀಜಿಂಗ್ ಓಲಿಂಪಿಕ್ಸ್ ನಲ್ಲಿ ಕಂಚು ಹಾಗೂ 2012 ಲಂಡನ್ ಓಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಮಹಿಳೆಯರ 62 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ಫೈನಲ್ ನಲ್ಲಿ ಸಾಕ್ಷಿ ಮಲಿಕ್ ನ್ಯೂಜಿಲೆಂಡಿನ ತಾಯ್ಲಾ ತೌಹೀನ್ ಅವರನ್ನು 13-2 ಪಾಯಿಂಟ್ ಗಳಿಂದ ಮಣಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸಾಕ್ಷಿ ಮಲಿಕ್ 2016 ರಲ್ಲಿ ನಡೆದ ರಿಯೋ ಓಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com