ತೆಲಗಿಯ ಆಸ್ತಿಯನ್ನು ದೇಶದ ಹಿತಕ್ಕಾಗಿ ಬಳಸಿಕೊಳ್ಳಿ : ಕೋರ್ಟ್‌ಗೆ ಪತ್ನಿ ಶಾಹಿದಾ ಮನವಿ

ಬೆಂಗಳೂರು : ಬಹುಕೋಟಿ ಛಾಪಾ ಕಾಗದ ಹಗರಣದ ಅಪರಾಧಿ ತೆಲಗಿಯ ರಾಜ್ಯದ ಎಲ್ಲಾ ಸ್ಥಿರಾಸ್ಥಿಗಳನ್ನು ಪಡೆದು ದೇಶದ ಹಿತಕ್ಕಾಗಿ ಬಳಿಸಿಕೊಳ್ಳುವಂತೆ ಆತನ ಪತ್ನಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ತೆಲಗಿಯ ಇನ್ನೂ ಸಾಕಷ್ಟು ಆಸ್ತಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ. ಆದ್ದರಿಂದ ಉಳಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಪತ್ನಿ ಶಾಹಿದಾ MCOCA  ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಬೆಳಗಾವಿ ಹಾಗೂ ವಿಜಯಪುರದಲ್ಲಿ ತೆಲಗಿಯ ಆಸ್ತಿ ಇದ್ದು, ಇದು ಎಷ್ಟು ಮೌಲ್ಯದ್ದು ಎಂದು ತಿಳಿದುಬಂದಿಲ್ಲ.
ತೆಲಗಿ ತಮ್ಮ ಹಾಗೂ ತಮ್ಮ ಸಂಬಂಧಿಕರ ಹೆಸರಿನಲ್ಲಿ ಖರೀದಿಸಿದ ಅನೇಕ ಆಸ್ತಿಗಳಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿಲ್ಲ. ತೆಲಗಿಯವರ ಕೊನೆಯ ಆಸೆಯಂತೆ ಈ ಎಲ್ಲಾ ಆಸ್ತಿಯನ್ನು ಸಾರ್ವಜನಿಕ ಹಿತಕ್ಕಾಗಿ ಮತ್ತು ದೇಶದ ಒಳಿತಿಗಾಗಿ ಬಳಸಿಕೊಳ್ಳಬೇಕು. ಪತಿಯ ಕೊನೆ ಆಸೆ ಈಡೇರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿ ಅಪರಾಧಿ ಎಂದು ಸಾಬೀತಾಗಿ ನ್ಯಾಯಾಂಗ ಬಂಧನದಲ್ಲಿದ್ದಾಗ ಕಳೆದ ಅಕ್ಟೋಬರ್ 23ರಂದು ವಿಕ್ಟೋರಿಯಾ ಆಸ್ಪತ್ರೆಯನ್ನು ನಿಧನ ಹೊಂದಿದ್ದನು.

Leave a Reply

Your email address will not be published.

Social Media Auto Publish Powered By : XYZScripts.com