Bangalore : ಸನ್ನಿ ಸ್ಟೆಪ್‌ ಹಾಕೋದನ್ನು ಯಾರಿಂದ್ಲೂ ನಿಲ್ಸಕ್ಕಾಗಲ್ಲ…..?

ಬೆಂಗಳೂರು : ಡಿಸೆಂಬರ್‌ 31ರ ರಾತ್ರಿ ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್‌ ಬಂದೇ ಬರ್ತಾರೆ , ಸೇಸಮ್ಮ ಸೇಸಮ್ಮ ಚಿತ್ರದ ಹಾಡಿಗೆ ಹೆಜ್ಜೆ ಹಾಕೇ ಹಾಕ್ತಾರೆ ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ. ಈ ಮೂಲಕ ಕರವೇ ಕಾರ್ಯಕರ್ತರು ಹಾಗೂ ಸರ್ಕಾರವನ್ನೇ ಎದುರುಹಾಕಿಕೊಳ್ಳಲು ಹೊರಟಿದ್ದಾರೆ.
ಸನ್ನಿ ಲಿಯೋನ್ ಬೆಂಗಳೂರಿಗೆ ಬರಬಾರದು. ಅವಳೇನಾದರು ಬಂದರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸನ್ನಿ ನೈಟ್ಸ್ ವಿರುದ್ದ ಸರ್ಕಾರ ಸಹ ನಿರ್ಬಂಧ ಹೇರಲು ನಿರ್ಧರಿಸಿದೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಸನ್ನಿ ನೈಟ್ಸ್‌ ಕಾರ್ಯಕ್ರಮವನ್ನು ಟೈಮ್ಸ್‌ ಕ್ರಿಯೇಷನ್‌ ಆಯೋಜಿಸಿದ್ದು, ಈ ಕುರಿತು ಮುಖ್ಯಸ್ಥ ಹರೀಶ್‌ ಹೇಳಿಕೆ ನೀಡಿದ್ದಾರೆ.  ಸನ್ನಿ ಲಿಯೋನ್‌ ಕುಣಿಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಕೌಟುಂಬಿಕೆ ಕಾರ್ಯಕ್ರಮ, ನಾಂಗಾ ನಾಚ್‌ ಎಂದು ತಪ್ಪಾಗಿ ತಿಳಿದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನನಗೂ ಕನ್ನಡ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಗೌರವವಿದೆ. ಆದ್ದರಿಂದಲೇ ಕಲಾವಿದರಿಗೂ ಗೌರವ ನೀಡುತ್ತೇವೆ ಎಂದಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ 2ರಿಂದ 3 ಕೋಟಿ ರೂನಷ್ಟು ಹೂಡಿಕೆ ಮಾಡಿದ್ದೇವೆ. ಈ ಬಗ್ಗೆ ಪೊಲೀಸ್‌ ಆಯುಕ್ತ ಸುನಿಲ್ ಕುಮಾರ್‌ ಅವರ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com