Gujarath : ಮೋದಿ ವಿರುದ್ದ ಸೆಡ್ಡು ಹೊಡೆದಿದ್ದ ಜಿಗ್ನೇಶ್‌ಗೆ ಜಯ : ರೂಪಾನಿಗೂ ಒಲಿದ ‘ವಿಜಯ’

ಅಹಮದಾಬಾದ್‌ : ಕುತೂಹಲಕರ ಕಾದಾಟದಲ್ಲಿ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಗೆಲುವು ಸಾಧಿಸಿದ್ದರೆ, ಮತ್ತೊಂದೆಡೆ ಮೋದಿಗೆ ಸೆಡ್ಡು ಹೊಡೆದಿದ್ದ ಜಿಗ್ನೇಶ್‌ ಮೇವಾನಿ ಸಹ 17 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಜ್‌ಕೋಟ್‌ನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್‌ನ ಇಂದ್ರನೀಲ್ ರಾಜ್ಯಗಾರು ಅವರ ವಿರುದ್ಧ ವಿಜಯ್ ರೂಪಾನಿ ಗೆದ್ದಿದ್ದಾರೆ. 2014ರಲ್ಲಿ ನಡೆದ ಚುನಾವಣೆಯಲ್ಲೂ ವಿಜಯ್‌ ರೂಪಾನಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಮತ್ತೊಂದೆಡೆ ಪ್ರಧಾನಿ ಮೋದಿ ಅವರಿಗೆ ಸೆಡ್ಡು ಹೊಡೆದಿದ್ದ ಜಿಗ್ನೇಶ್‌ ಮೇವಾನಿ ಅವರು ವದ್ಗಾಮ್‌ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ್‌ ಕುಮಾರ್‌ ಹರ್ಕಭಾಯಿ ಅವರ ವಿರುದ್ದ ಗೆಲುವು ಸಾಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com