EVM ಹ್ಯಾಕ್ ಮಾಡಲು ಬಿಜೆಪಿಯಿಂದ 140 ಇಂಜಿನಿಯರ್‌ಗಳ ನೇಮಕ : ಹಾರ್ದಿಕ್‌ ಪಟೇಲ್‌ ಆರೋಪ

ಅಹಮದಾಬಾದ್‌ : ಗುಜರಾತ್‌ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ತಿರುಚಲು ಬಿಜೆಪಿ140 ಇಂಜಿನಿಯರ್‌ಗಳ ನೇಮಕ ಮಾಡಿರುವುದಾಗಿ ಪಾಟೀದಾರ್ ಸಮುದಾಯದ ಮುಖ್ಯಸ್ಥ  ಹಾರ್ದಿಕ್‌ ಪಟೇಲ್‌ ಆರೋಪಿಸಿದ್ದಾರೆ.

ಗುಜರಾತ್‌ ಚುನಾವಣಾ ಪಲಿತಾಂಶಕ್ಕೂ ಮುನ್ನ ಹಾರ್ದಿಕ್‌ ಪಟೇಲ್‌ ಈ ಬಾಂಬ್ ಸಿಡಿಸಿದ್ದಾರೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ ಗೆಲ್ಲುವ ಸ್ಥಾನಗಳಲ್ಲಿ ಬಿಜೆಪಿ ಸುಮಾರು 5000ಕ್ಕೂ ಹೆಚ್ಚು ಮತಯಂತ್ರಗಳನ್ನು ಟ್ಯಾಂಪರ್‌ ಮಾಡುವ ಸಲುವಾಗಿ 140 ಇಂಜಿನಿಯರ್‌ಗಳು ಕೆಲಸ ಮಾಡಿರುವುದಾಗಿ ಹೇಳಿದ್ದಾರೆ. ಈ ಸಬಂಧ ಅಹಮದಾಬಾದ್‌ನ ಕಂಪನಿಯೊಂದು 140 ಇಂಜಿನಿಯರ್‌ಗಳ ಮೂಲಕ ಇವಿಎಂ ಮಷೀನ್‌ನನ್ನು ಹ್ಯಾಕ್‌ ಮಾಡಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಹಾರ್ದಿಕ್‌ ಪಟೇಲ್ ಅವರ ಆರೋಪವನ್ನು ಜಿಲ್ಲಾಡಳಿತ ನಿರಾಕರಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಅವಂತಿಕಾ ಸಿಂಗ್‌ ಹೇಳಿಕೆ ನೀಡಿದ್ದಾರೆ. ಇದು ಆಧಾರ ರಹಿತ ಆರೋಪ. ಈ ಬಗ್ಗೆ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು. ಆಧಾರ ರಹಿತ ಆರೋಪಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಇನ್ನು ಇವಿಎಂ ಹ್ಯಾಕ್‌ ಕುರಿತಂತೆ ಭಾನುವಾರವೂ ಹಾರ್ದಿಕ್‌ ಪಟೇಲ್ ಹೇಳಿಕೆ ನೀಡಿದ್ದು, ಎಟಿಎಂಗಳನ್ನು ಹ್ಯಾಕ್‌ ಮಾಡಬಹುದಾದರೆ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು. ಪಾರದರ್ಶಕವಾಗಿ ಚುನಾವಣೆ ನಡೆದಿದ್ದೇ ಆದರೆ ಬಿಜೆಪಿಗೆ ಸೋಲು ಖಚಿತ  ಎಂದಿದ್ದರು.

Leave a Reply

Your email address will not be published.