ಈ ರಾಶಿಯವರು ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರಂತೆ… ನಿಮ್ಮ ರಾಶಿಯೂ ಇದರಲ್ಲಿದ್ಯಾ ನೋಡಿ…

ಮನುಷ್ಯ ಸದಾ ಸತ್ಯವಂತನಾಗಿರಲು ಸಾಧ್ಯವಿಲ್ಲ. ಕೆಲವೊಂದು ಸಂದರ್ಭದಲ್ಲಿ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಇನ್ನೊಬ್ಬರಿಗೆ ನಮ್ಮ ಸುಳ್ಳಿನಿಂದ ಖುಷಿ ಸಿಗುವಂತಿದ್ದರೆ ಆ ರೀತಿಯ ಸುಳ್ಳನ್ನು ಹೇಳುವುದರಲ್ಲಿ ತಪ್ಪಿಲ್ಲ.
ಇನ್ನು ಕೆಲವರು ಏನೇ ಸಂದರ್ಭ ಬಂದರೂ ಸತ್ಯವನ್ನು ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಸುಳ್ಳು ಹೇಳಿದರೂ ಒಂದಲ್ಲಾ ಒಂದು ದಿನ ಸತ್ಯ ಬಾಯ್ಬಿಡುತ್ತಾರೆ. ಅಲ್ಲದೆ ತಾವು ಹೇಳಿದ ಸುಳ್ಳಿಗೆ ಪಶ್ಚಾತ್ತಾಪ ಪಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸುಳ್ಳು ಹೇಳಲು ಬರುವುದಿಲ್ಲ. ಒಂದೊಮ್ಮೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರೆ ಅದು ಇನ್ನೊಬ್ಬರಿಗೆ ಸಲೀಸಾಗಿ ತಿಳಿಯುತ್ತದೆ.
ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಮಾತುಗಳು ಅವರವರ ರಾಶಿಚಕ್ರದ ಅನುಗುಣವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ರೀತಿಯ ಸುಳ್ಳು ಹೇಳುತ್ತಾರೆ. ಅದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ನೋಡೋಣ.
ವೃಷಭ : ಇವರು ಬಹಳ ಸಲೀಸಾಗಿ ಸುಳ್ಳು ಹೇಳುತ್ತಾರೆ. ಇವರಿಗೆ ಸುಳ್ಳು ಹೇಳಲು ಯಾವುದೇ ಕಾರಣಗಳಿರುವುದಿಲ್ಲ. ಚಿಕ್ಕ ಚಕ್ಕ ವಿಚಾರಕ್ಕು ಇವರು ಸುಳ್ಳು ಹೇಳುವ ಚಾಳಿ ಬೆಳೆಸಿಕೊಂಡಿರುತ್ತಾರೆ. ಕೆಲವೊಮ್ಮೆ ಇವರು ಹೇಳುವ ಸುಳ್ಳು ಇತರರಿಗೆ ನೋವುಂಟು ಮಾಡುತ್ತದೆ.
ಮಿಥುನ : ಇವರು ಚಾಲಾಕಿಗಳು. ಬಹಳ ಸುಂದರವಾಗಿ ಸುಳ್ಳು ಹೇಳುವ ಕಲೆ ಇವರದ್ದಾಗಿರುತ್ತದೆ. ಕೆಲವೇ ಸಂದರ್ಭಗಳಲ್ಲಿ ಮಾತ್ರ ಇವರು ಸತ್ಯ ಹೇಳುತ್ತಾರೆ. ಇವರು ದ್ವಂದ್ವ ಪ್ರವೃತ್ತಿಯುಳ್ಳವರಾಗಿದ್ದು, ಇದೇ ಇವರನ್ನು ಸುಳ್ಳು ಹೇಳಲು ಅನುವು ಮಾಡಿಕೊಡುತ್ತದೆ. ಇವರು ಸಮಯಕ್ಕೆ ತಕ್ಕಂತೆ, ತಮಗೆ ಬೇಕಾದ ರೀತಿ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಾರೆ.
ಕಟಕ : ಇವರು ಎಲ್ಲಾ ಸಂದರ್ಭದಲ್ಲೂ ಸುಳ್ಳು ಹೇಳುವುದಿಲ್ಲ. ಅಗತ್ಯ ಬಿದ್ದಾಗ ಮಾತ್ರ ಸುಳ್ಳು ಹೇಳುತ್ತಾರೆ. ಇವರು ಮೃದು ಸ್ವಭಾವದವರಾಗಿರುತ್ತಾರೆ. ಇವರು ಸ್ವಭಾವತಃ ಒಳ್ಳೆಯವರಾಗಿದ್ದು, ಕೆಲವು ಸಂದರ್ಭದಲ್ಲಿ ಮಾತ್ರ ಸುಳ್ಳು ಹೇಳುತ್ತಾರಿ. ಹಾಗಂತ ಇವರ ಸ್ವಭಾವವೇ ಸುಳ್ಳು ಹೇಳುವುದಾಗಿರುವುದಿಲ್ಲ. ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಸುಳ್ಳು ಹೇಳುತ್ತಾರೆ.
ವೃಶ್ಚಿಕ : ಇವರು ಅತೀ ಹೆಚ್ಚು ಸುಳ್ಳು ಹೇಳುವ ಪ್ರವೃತ್ತಿಯವರಾಗಿರುತ್ತಾರೆ. ನಿಜ ಹೇಳಿದರೆ ನೈಜ ಜೀವನಕ್ಕೆ ಚ್ಯುತಿ ಉಂಟಾಗುತ್ತದೆ ಎಂಬ ಭಾವನೆ ಇವರಲ್ಲಿದೆ. ಇದು ಕೇಳುಗರಿಗೆ ಸುಳ್ಳೆಂದು ಅನಿಸುವುದೇ ಇಲ್ಲ. ಇವರು ತೀಕ್ಷ್ಣ ಮತಿಗಳಾಗಿದ್ದು, ಬೇರೆಯವರನ್ನು ನಿಯಂತ್ರಿಸುವುದು ಇವರಿಗೆ ಇಷಟವಾಗುವುದಿಲ್ಲ. ತಾವೇ ಎಲ್ಲರೆದುರು ಗುರುತಿಸಿಕೊಳ್ಳಬೇಕೆಂದು ಹವಣಿಸುತ್ತಿರುತ್ತಾರೆ. ಇವರು ಚಂಚಲ ವ್ಯಕ್ತಿಗಳಾಗಿದ್ದು, ಇದೇ ಕಾರಣಕ್ಕಾಗಿ ಸುಳ್ಳಿನ ಚಟಕ್ಕೆ ಬಿದ್ದಿರುತ್ತಾರೆ.
ಧನಸ್ಸು : ಬಹಳ ಸುಂದರವಾಗಿ ಸುಳ್ಳುಗಳನ್ನು ಹೇಳುವ ಇವರು, ಸತ್ಯ ಹೇಳಿದರೆ ಕೆಟ್ಟದ್ದಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ವರ್ತಿಸುತ್ತಾರೆ. ಸುಳ್ಳನ್ನು ಅನೇಕ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಮಾತಿನಂತೆ ಇವರು ಸುಳ್ಳು ಹೇಳಿ ಅದನ್ನೇ ಸತ್ಯ ಎಂಬಂತೆ ಬಿಂಬಿಸುತ್ತಾರೆ. ಇವರು ಸಂತೋಷ ಸ್ವಭಾವದವರಾಗಿದ್ದು, ಈ ಕ್ಷಣವನ್ನು ಆನಂದಿಸಲು ಬಯಸುತ್ತಾರೆ. ಸ್ವಲ್ಪವೂ ಸಂಕೋಚ ಇಲ್ಲದೆ ಸುಳ್ಳು ಹೇಳುವುದು ಇವರ ಪ್ರವೃತ್ತಿಯಾಗಿರುತ್ತದೆ.

 

 

Leave a Reply

Your email address will not be published.

Social Media Auto Publish Powered By : XYZScripts.com