ನಮಗೆ ಅಧಿಕಾರ ಕೊಡಿ, ಗೌರಿ ಹಂತಕರನ್ನು ನಿಮ್ಮೆದುರು ತಂದು ನಿಲ್ಲಿಸ್ತೇವೆ : ರಾಜ್‌ನಾಥ್‌ ಸಿಂಗ್‌

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೆ ನಾವು ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಮಾಡಿದವರನ್ನು ತಂದು ನಿಮ್ಮ ಮುಂದೆ ನಿಲ್ಲಿಸುವುದಾಗಿ ಕೇಂದ್ರ ಸಚಿವ ರಾಜನಾಥ್ ಸಿಂಗ್‌ ಹೇಳಿದ್ದಾರೆ.
ಬೆಂಗಳೂರಿನ ಮುರುಗೇಶ್‌ಪಾಳ್ಯದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ರಾಜ್‌ನಾಥ್‌ ಸಿಂಗ್, ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಗೌರಿ ಹಂತಕರನ್ನು ಹುಡುಕುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಮೇಲೆ ಸಾಕಷ್ಟು ಸಾಲದ ಹೊರೆಯನ್ನು ಹೊರಿಸಿದೆ. ಸಾಮಾಜಿಕ ಕಾರ್ಯಕರ್ತರ ಮೇಲೆ ನಡು ಬೀದಿಯಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಎಲ್ಲೆಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನೆಲ್ಲ ತಡೆಯಲು ಇರುವುದು ಒಂದೇ ದಾರಿ, ನೀವು ನಮಗೆ ಅಧಿಕಾರ ಕೊಡಿ, ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ, ದುಷ್ಕರ್ಮಿಗಳನ್ನು ಮಟ್ಟ ಹಾಕಲು ಬಿಜೆಪಿ ಸದಾ ಮುಂದಿರುತ್ತದೆ. ನಮಗೆ ವಿವಾದಾತ್ಮಕ ಜಯಂತಿಗಳಿಂದ ದೂರವಿರಬೇಕು. ನಾವು ವಿಶ್ವೇಶ್ವರಯ್ಯ ಜಯಂತಿ, ಚೆನ್ನಮ್ಮನವರಂತಹ ಮಹಾನ್ ಸಾಧಕರ ಜಂತಿಯನ್ನು ಆಚರಿಸೋಣ ಎಂದಿದ್ದಾರೆ.
ರಾಜ್‌ ನಾಥ್‌ ಸಿಂಗ್ ಕಾರ್ಯಕ್ರಮಕ್ಕೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಆಗಲೇ ಕಾರ್ಯಕರ್ತರೆಲ್ಲರೂ ಎದ್ದು ಹೋಗಿದ್ದು ಖಾಲಿ ಕುರ್ಚಿಗಳ ಎದುರೇ ಭಾಷಣ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com