Shocking : ಗೋವಾದಲ್ಲಿ Paid sex ಗೂ ಬೇಕು “ಆಧಾರ್‌”….!!!

ಪಣಜಿ : ಆಧಾರ್ ಸಂಖ್ಯೆಯನ್ನು ಬ್ಯಾಂಕ್‌ ಖಾತೆ, ಫೋನ್‌ ನಂಬರ್‌ ಸೇರಿದಂತೆ ಸರ್ಕಾರಿ ಸೇವೆಗಳನ್ನು ಪಡೆಯಲು ಕೇಂದ್ರ ಸರ್ಕಾರ ಆಧಾರ್‌ ಸಂಖ್ಯೆಯನ್ನು ಕಡ್ಡಾಯ ಮಾಡಿದ್ದು, ಈ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಗೋವಾದಲ್ಲಿ ಈಗ ಪೇಯ್ಡ್‌ ಸೆಕ್ಸ್‌ಗೂ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಗೋವಾದಲ್ಲಿ ಪೇಯ್ಡ್‌ ಸೆಕ್ಸ್‌ಗಾಗಿ ಆಧಾರ್‌ ಕಾರ್ಡ್‌ ಕೇಳುತ್ತಿದ್ದಾರೆ ಎಂಬ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಪ್ರಸಾರ ಮಾಡಿದೆ. ಪಿಂಪ್‌ಗಳಿಗೆ ಆಧಾರ್‌ ಕಾರ್ಡ್‌ ತೋರಿಸಿದರೆ ಮಾತ್ರ ಸೆಕ್ಸ್‌ಗೆ ಅವಕಾಶ ನೀಡಲಾಗುತ್ತಿದೆ ಎಂಬ ಅಂಶವನ್ನು ದೆಹಲಿ ಮೂಲದ ಪ್ರವಾಸಿಗರು ಬಹಿರಂಗಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಗೋವಾದಲ್ಲಿ ಪಿಂಪ್‌ಗಳು ತಮ್ಮನ್ನು ಹುಡುಗಿಯರಿಗಾಗಿ ಕೇಳುವವರು ಪೊಲೀಸರು ಅಥವಾ ಪೊಲೀಸರಿಗೆ ಮಾಹಿತಿ ನೀಡುವವರು ಅಲ್ಲ ಎಂಬುದನ್ನು ಖಚಿತಪಡಿಸಲು ಆಧಾರ್‌ ಕಾರ್ಡನ್ನು ಬಳಕೆ ಮಾಡುತ್ತಿದ್ದಾರಂತೆ

ದೆಹಲಿ ಮೂಲದ ಯುವಕರು ಗೋವಾಗೆ ತೆರಳಿದ್ದರು. ಇವರು ಪಿಂಪ್ ಒಬ್ಬನ ಬಳಿ ಐವರು ಹುಡುಗಿಯರು ಬೇಕೆಂದು ಕೇಳಿದ್ದಾರೆ. ಕೂಡಲೆ ಪಿಂಪ್‌ ಹುಡುಗರ ಬಳಿ ಆಧಾರ್‌ಕಾರ್ಡ್‌ ಕೇಳಿದ್ದಾರೆ. ಅಲ್ಲದೆ ಐವರ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಕಳಿಸುವಂತೆ ಕೇಳಿದ್ದು, ಹೋಟೆಲ್‌ ರೂಮಿನ ಕೀಗಳ ಫೋಟೋಗಳನ್ನೂ ಕೇಳಿದ್ದಾರೆ ಎಂದು ಯುವಕರು ಹೇಳಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಗೆ ಬ್ರೇಕ್‌ ಹಾಕಲು ಗೋವಾ ಪೊಲೀಸರು ಮಾರುವೇಶದಲ್ಲಿ ಬಂದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪಿಂಪ್‌ಗಳು ಈ ರೀತಿ ಆಧಾರ್‌ ಕಾರ್ಡ್‌ ಕೇಳಿದ್ದಾರೆ ಎನ್ನಲಾಗಿದೆ.

ಅಲ್ಲದೆ ಗೋವಾದಲ್ಲಿ ಮಾಂಸದಂಧೆ ಸಹ ನಡೆಯುತ್ತಿದ್ದು, ಅದನ್ನು ತಡೆಯಲು ಪೊಲೀಸರು ಮಾರುವೇಶದಲ್ಲಿ ಬರಬಹುದು ಎಂಬ ಕಾರಣದಿಂದ ಆಧಾರ್‌ ಕೇಳುವುದನ್ನು ಕಡ್ಡಾಯ ಮಾಡಿಕೊಂಡಿದ್ದಾರೆ ಅಲ್ಲಿನ ಪಿಂಪ್‌ಗಳು.

Leave a Reply

Your email address will not be published.

Social Media Auto Publish Powered By : XYZScripts.com