ನಾನೇನೇ ಹೋರಾಟ ಮಾಡಿದ್ರೂ ಮರುದಿನ ಪ್ರೇಮಕುಮಾರಿ ಪ್ರತ್ಯಕ್ಷವಾಗ್ತಿದ್ದಾರೆ : ರಾಮದಾಸ್‌

ಮೈಸೂರು : ಮಾಜಿ ಸಚಿವ ರಾಮದಾಸ್‌ ಪ್ರೇಮ ಪ್ರಕರಣದ ಪ್ರೇಮಲತಾ  ರಾಜಕೀಯ ಪಾದಾರ್ಪಣೆಗೆ ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವಾಗ ಹೋರಾಟ ಮಾಡಿದರೂ ಮರುದಿನ ಪ್ರೇಮಕುಮಾರಿ ಪ್ರತ್ಯಕ್ಷವಾಗುತ್ತಾರೆ. ಇದರ ಹಿಂದೆ ನನ್ನ ರಾಜಕೀಯ ವಿರೋಧಿಗಳ ಕೈವಾಡವಿದೆ. ಇದರಿಂದ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದಿಲ್ಲ. ಅವರು ರಾಜಕೀಯಕ್ಕೆ ಬಂದರೆ ನಾನು ಸ್ವಾಗತಿಸುತ್ತೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನ್ನ ಹಾಗು ಪ್ರೇಮ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಯಾರು ಏನೇ ಪಿತೂರಿ ಮಾಡಿದರೂ ನಾನು ಎಲ್ಲವನ್ನೂ ಗೆದ್ದು ಬರುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com