BJP ಯವರ ಕಿರುಕುಳ ತಾಳಲಾರದೆ ಮಲ್ಲಮ್ಮ ಕಾಂಗ್ರೆಸ್‌ಗೆ ಸೇರಿದ್ದಾರೆ : ಸಿದ್ದರಾಮಯ್ಯ

ಕಲಬುರ್ಗಿ : ಹತ್ಯೆಯಾಗಿರುವ ಧಾರವಾಡ ಜಿಲ್ಲಾ ಪಂಚಾಯಿತ್‌ ಸದಸ್ಯ ಬಿಜೆಪಿಯ ಯೋಗೀಶ್‌ ಗೌಡ ಅವರ ಪತ್ನಿ ಮಲ್ಲಮ್ಮ, ಬಿಜೆಪಿಯವರ ಕಿರುಕುಳ ತಾಳಲಾರದೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಲ್ಲಮ್ಮ ಅವರನ್ನು ಕಾಂಗ್ರೆಸ್‌ ಹೈಜಾಕ್‌ ಮಾಡಿದೆ ಎಂಬ ಆರೋಪ ಸುಳ್ಳು ಎಂದಿರುವ ಸಿಎಂ, ಮಲ್ಲಮ್ಮ ಸ್ವ ಇಚ್ಛೆಯಿಂದಲೇ ಕಾಂಗ್ರೆಸ್‌ ಸೇರಿದ್ದಾರೆ. ಅದರಲ್ಲಿ ಕಾಂಗ್ರೆಸ್‌ನ ಯಾವುದೇ ನಾಯಕರ ಕೈವಾಡವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಲ್ಲಮ್ಮ ಅವರು ಬಿಜೆಪಿ ವಿರುದ್ದವೇ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದು, ಬಿಜೆಪಿ ವಿರುದ್ದವೇ ತಿರುಗಿ ಬಿದ್ದಿದ್ದಾರೆ. ಈ ಮೂಲಕ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ್‌ ಕುಲಕರ್ಣಿ ಅವರ ಕೈವಾಡವಿದೆ ಎಂದಿದ್ದ ಬಿಜೆಪಿಗೆ ಮಲ್ಲಮ್ಮ ತಿರುಗೇಟು ನೀಡಿದ್ದಾರೆ.

 

Leave a Reply

Your email address will not be published.