Jaipur Shocking : ಮಗಳು ಪ್ರೀತಿಯಲ್ಲಿ ಬಿದ್ದಿದ್ಲು ಅಂತ ಅಪ್ಪ ಮಾಡಿದ್ದೇನು…….?

ಜೈಪುರ : ಜೈಪುರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದೆ. ಮಗಳು ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ತಂದೆ ಹಾಗೂ ಕುಟುಂಬಸ್ಥರು ಸೇರಿ ಯುವತಿಯನ್ನು ೋಕಟ್ಟಿ ಗುಂಡಿಕ್ಕಿ ಕೊಂದಿರುವ ಘಟನೆ ಸಾಮ್ರಾಟ್‌ಪುರ ಗ್ರಾಮದಲ್ಲಿ ನಡೆದಿದೆ.

ಪಿಯುಸಿ ಓದುತ್ತಿದ್ದ ಹುಡುಗಿ ತನ್ನ ಸಹಪಾಠಿಯನ್ನು ಪ್ರೀತಿಸುತ್ತಿದ್ದಳು. ಇದು ಮನೆಯವರಿಗೆ ತಿಳಿದು ಆತನನ್ನು ನೀನು ಪ್ರೀತಿಸಬೇಡ ಎಂದಿದ್ದಾರೆ. ಇದಕ್ಕೆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯನ್ನು ಪೋಷಕರು ಮನೆಯಿಂದ ಹೊರಹೋಗಲು ಬಿಡದೆ ಮಂಚಕ್ಕೆ ಕಟ್ಟಿಹಾಕಿದ್ದು, ತಂದೆಯೇ ಆಕೆಯನ್ನು ಶೂಟ್‌ ಮಾಡಿದ್ದಾರೆ. ಬಳಿಕ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ದು ಅಲ್ಲೇ ಸುಟ್ಟು ಹಾಕಿರುವುದಾಗಿ ಮೂಲಗಳು ವರದಿ ಮಾಡಿವೆ.

ವಿಚಾರ ತಿಳಿದ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಯುವತಿಯ ತಂದೆ ಬನ್‌ಸಿಂಗ್, ಚಿಕ್ಕಪ್ಪ ಉದಯ್‌ ಸಿಂಗ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com