Honnavara : ವಿದ್ಯಾರ್ಥಿನಿಗೆ ಚಾಕು ಇರಿತ ಪ್ರಕರಣಕ್ಕೆ Big twist……ಏನದು ?

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ವಿದ್ಯಾರ್ಥಿನಿ ಕೈಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ವಿದ್ಯಾರ್ಥಿನಿಯ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಬದಲಿಗೆ ಪ್ರೇಮ ಪ್ರಕರಣದಲ್ಲಿ ಹಿಂಸೆಗೊಳಗಾಗಿ ಆಕೆಯೇ ತನ್ನ ಕೈ ಕೊಯ್ದುಕೊಂಡಿರುವುದಾಗಿ ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.

ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿ ವಿನಾಯಕ್‌ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ವಿದ್ಯಾರ್ಥಿನಿ ಶಾಲೆಗೆ ಹೋಗುವ ವೇಳೆ ಗಣೇಶ್ ಎಂಬಾತ ಆಕೆಯ ಬಳಿ ತನ್ನನ್ನು ಪ್ರೀತಿಸು ಎಂದು ತೊಂದರೆ ಕೊಡುತ್ತಿದ್ದ. ಇದೇ ವೇಳೆ ಪರೀಕ್ಷೆ ಸಹ ಹತ್ತಿರ ಬಂದ ಹಿನ್ನೆಲೆಯಲ್ಲಿ ಗಾಬರಿಯಾದ ವಿದ್ಯಾರ್ಥಿನಿ ಯುವಕ ಹಾಗೂ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕೈಕೊಯ್ದುಕೊಂಡಿದ್ದಾಳೆ ಎಂದಿದ್ದಾರೆ.

ಸದ್ಯ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಗಣೇಶ್‌ನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಬಾಲಕಿಗೆ ಕೌನ್ಸಿಲಿಂಗ್‌ ನಡೆಸಲಾಗಿದೆ.

ಹೊನ್ನಾವರದಲ್ಲಿ ಬಿಜೆಪಿ ಕಾರ್ಯಕರ್ತ ಪರೇಶ್‌ ಮೇಸ್ತಾ ಅನುಮಾನಾಸ್ಪದ ಸಾವಿನ ಪ್ರಕರಣ ಸಂಬಂಧ ರಾಜ್ಯದೆಲ್ಲೆಡೆ ಕೋಮು ದಳ್ಳುರಿ ಹರಡಿತ್ತು. ಇದಾದ ಕೆಲವೇ ದಿನಗಳಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿಯಲಾಗಿದೆ ಎಂದು ಗಾಳಿಸುದ್ದಿ ಹಬ್ಬಿಸಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com