ಅಯೋಗ್ಯ ಯಾರು ಅಂತ ಜನರೇ ತೀರ್ಮಾನಿಸುತ್ತಾರೆ ಯಡಿಯೂರಪ್ಪನವರೇ…: CM ಸಿದ್ಧರಾಮಯ್ಯ

ಕಲಬುರ್ಗಿ : ಯಡಿಯೂರಪ್ಪನವರಿಗೆ  ನಾಲಾಯಕ್‌, ಅಯೋಗ್ಯ ಪದಗಳು ಬಿಟ್ಟರೆ ಬೇರೆ ಗೊತ್ತಿಲ್ಲ. ಆದ್ದರಿಂದ ಅವರು ಹೋದಲ್ಲೆಲ್ಲ ಅದೇ ಪದಗಳನ್ನು ಬಳಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೊಗಳೆ ದಾಸಯ್ಯ ಎಂಬಂತಹ ಮಾತುಗಳನ್ನಾಡಿದ್ದಾರೆ. ನಾವು ಬೊಗಳೆ ದಾಸರಲ್ಲ. ಯಾರು ಬೊಗಳೆ ದಾಸರು ಎಂಬುದನ್ನು ತಿಳಿದುಕೊಳ್ಳಲು ಬಹಿರಂಗ ಚರ್ಚೆಗೆ ಬರಲ ಎಂದು ಸಿಎಂ, ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದಾರೆ. ಜೊತೆಗೆ ಅಯೋಗ್ಯ ಯಾರೆಂಬುದನ್ನು ಜನರೇ ತೀರ್ಮಾನಿಸುವುದಾಗಿ ಹೇಳಿದ್ದಾರೆ.

ಇದೇ ವೇಳೆ  ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುವುದಿಲ್ಲ ಎಂಬ ವಿಚಾರ ಕುರಿತು ಮಾತನಾಡಿದ ಸಿಎಂ, ರಾಜಕೀಯಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟ ವಿಷಯ.  ಸದ್ಯ ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ್ದಾರೆ . ಸೋನಿಯಾ ಗಾಂಧಿ ಅವರೂ ಸಹ ರಾಜಕೀಯವಾಗಿ ಮಾರ್ಗದರ್ಶನ ನೀಡುತ್ತಾರೆ.  ಪ್ರಿಯಾಂಕಾ ಗಾಂಧಿ ಅವರೂ ರಾಹುಲ್ ಗಾಂಧಿಗೆ ಸಹಕಾರ ನೀಡಲಿದ್ದಾರೆ. ರಾಹುಲ್ ಗಾಂಧಿಗೆ ಅಧಿಕಾರ ನೀಡಿದ ನಂತರ ಮುಂದಿನ ದಿನಗಳಲ್ಲಿ ಪಕ್ಷ ಬಲವರ್ಧನೆಯಾಗಲಿದೆ. ಹಿರಿಯರು ನಿವೃತ್ತಿಯಾಗಲಿ ಎಂಬುದು ಅದರ ಅರ್ಥವಲ್ಲ. ಹಿರಿಯರ ಮಾರ್ಗದರ್ಶನದೊಂದಿಗೆ ರಾಹುಲ್ ಗಾಂಧಿ ಪಕ್ಷ ಮುನ್ನಡೆಸಲಿದ್ದಾರೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com