BIGG BOSS : ಈ ವಾರ ಎಲಿಮಿನೇಟ್ ಆದ ಜಗನ್‌ಗೆ ಕಿಚ್ಚನ ಮನದಾಳದ ಮಾತು….ಏನದು…?

ಬೆಂಗಳೂರು : ಬಿಗ್‌ಬಾಸ್ ಪ್ರಾರಂಭವಾದಾಗಿನಿಂದಲೂ ಸದಾ ಜಗಳವಾಡಿಕೊಂಡೇ ಸುದ್ದಿಯಾಗುತ್ತಿದ್ದ ಜಗನ್ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ಬಾಸ್‌ ಸೀಸನ್‌5 ಈಗಾಗಲೆ 9 ವಾರಗಳನ್ನು ಮುಗಿಸಿದೆ. ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳೆಲ್ಲರೂ ಟಫ್‌ ಕಂಟಸ್ಟೆಂಟ್‌ ಎಂದು ಕರೆಸಿಕೊಳ್ಳುವವರೇ ಆಗಿದ್ದರು. ಆದ್ದರಿಂದ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚೇ ಇತ್ತು.  ಇದಕ್ಕೆಲ್ಲ ತೆರೆ ಎಳೆದಿದ್ದು ಕಿಚ್ಚ ಸುದೀಪ್‌. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಜಗನ್‌ ಅವರನ್ನು ಮನೆಯಿಂ ಹೊರಬರುವಂತೆ ಸೂಚಿಸಿದಾಗಿ ಮನೆಯಲ್ಲಿದ್ದ ಅನುಪಮಾ, ಕೃಷಿ ಹಾಗೂ ಶ್ರುತಿ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಜಗನ್‌ ಅವರನ್ನು ಸಮಾಧಾನಪಡಿಸಿ ಮನೆಯಿಂದ ಬೀಳ್ಕೊಟ್ಟರು.

ಈ ಬಾರಿ ಕಿಚ್ಚನ ಎಪಿಸೋಡ್‌ ವಿಭಿನ್ನವಾಗಿ ಮೂಡಿಬಂದಿತ್ತು. ಕಾರಣ ಅವರ ವೈಯಕ್ತಿಕ ಅಭಿಪ್ರಾಯ. ಹೌದು ಇಷ್ಟು ಸೀಸನ್‌ನಲ್ಲಿ ಯಾರಿಗೂ ಹೇಲದ ಮಾತೊಂದನ್ನು ಸುದೀಪ್‌ ಜಗನ್‌ ಗೆ ಹೇಳಿದ್ರು. ನೀವೊಬ್ಬ ಸ್ಟ್ರಾಂಗ್ ಕಂಟಸ್ಟಂಟ್‌. ನೀವ್ಯಾಕೆ ಹೊರಬರುತ್ತಿದ್ದೀರೋ ನನಗೆ ತಿಳಿಯುತ್ತಿಲ್ಲ. ನಿಮಗೆ ಮನೆಯಲ್ಲಿ ಇನ್ನೂ ಹೆಚ್ಚು ದಿನ ಇರುವ ಅರ್ಹತೆ ಇದೆ. ನಾನು ಮನಸಾರೆ ಹೇಳುತ್ತಿದ್ದೇನೆ. ನೀವೊಬ್ಬ ಸ್ಟ್ಟಾಂಗ್ ಕಂಟಸ್ಟಂಟ್‌. ಹೊರಗೆ ಬಂದು ನನ್ನನ್ನೊಮ್ಮೆ ತಬ್ಬಿಕೊಳ್ಳಿ ಎಂದರು.

ಸುದೀಪ್ ಈ ಹಿಂದೆ ಯಾವ ಸ್ಪರ್ಧಿಗಳಿಗೂ ಈ ರೀತಿ ಹೇಳಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಜಗನ್‌ ಕುರಿತು ವೈಯಕ್ತಿಕವಾಗಿ ಭರವಸೆಯ ಮಾತನ್ನಾಡಿದ್ರು.

Leave a Reply

Your email address will not be published.

Social Media Auto Publish Powered By : XYZScripts.com