ಮೆಗಾಸ್ಟಾರ್‌ ಚಿರಂಜೀವಿ ಕುಟುಂಬದ ಅಳಿಯನಾಗ್ತಾರಂತೆ ಬಾಹುಬಲಿ ಪ್ರಭಾಸ್‌…..?

ಬಾಹುಬಲಿ ಸಿನಿಮಾದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುವ ನಟ ಪ್ರಭಾಸ್. ಈ ನಟನ ಮದುವೆ ಕುರಿತಂತೆ ಸಾಕಷ್ಟು ವದಂತಿಗಳು ಹರಡುತ್ತಲೇ ಇದೆ. ಆದರೆ ಅವರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಾಹೋ ಚಿತ್ರದ ಕಡೆ ಗಮನ ಹರಿಸಿದ್ದಾರೆ.

ಆದರೆ ಈಗ ಮತ್ತೊಂದು ಸುದ್ದಿ ಬಂದಿದೆ. ಪ್ರಭಾಸ್‌ ಯಾರನ್ನು ಮದುವೆಯಾಗಲಿದ್ದಾರೆ ಎಂಬುದರ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಲೇ ಇದೆ. ಈ ಮಧ್ಯೆ ಪ್ರಭಾಸ್‌ ಮೆಗಾಸ್ಟಾರ್‌ ಚಿರಂಜೀವಿ ಅವರ ಕುಟುಂಬದ ಅಳಿಯನಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

 

ಚಿರಂಜೀವಿ ಸಹೋದರ, ನಟ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಅವರನ್ನು ಪ್ರಭಾಸ್‌ ಮದುವೆಯಾಗಲಿದ್ದಾರೆ. ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ನಿಹಾರಿಕಾ ಅನೇಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ನಿಹಾರಿಕಾ, ನಟ ವರುಣ್ ತೇಜ ಅವರ ಸಹೋದರಿಯಾಗಿದ್ದು, ಪ್ರಭಾಸ್‌ ಹಾಗೂ ನಿಹಾರಿಕಾ ಮದುವೆ ಸುದ್ದಿ ಬಗ್ಗೆ ಅಭಿಮಾನಿಗಳು ಕುತೂಹಲ ತಳೆದಿದ್ದಾರೆ.

ಆದರೆ ಈ ಕುರಿತು ಸ್ವತಃ ಚಿರಂಜೀವಿ ಅವರೇ ಹೇಳಿದ್ದು, ಇದು ಸುಳ್ಳು ಸುದ್ದಿ, ಆ ರೀತಿ ಏನೂ ಇಲ್ಲ. ಹಾಗೇನಾದರು ಇದ್ದರೆ ನಾವೇ ಹೇಳುತ್ತೇವೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com