BWF ದುಬೈ ಸೂಪರ್ ಸಿರೀಸ್ : ಫೈನಲ್ ನಲ್ಲಿ ನಿರಾಸೆ : ಸಿಂಧುಗೆ ಬೆಳ್ಳಿ ಪದಕ

ದುಬೈ ಓಪನ್ ಸೂಪರ್ ಸಿರೀಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದಾರೆ. ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಕಾನೆ ಯಾಮಾಗುಚಿ ವಿರುದ್ಧ ಸಿಂಧು 21-15, 12-21, 19-21 ಪಾಯಿಂಟ್ ಗಳಿಂದ ಸೋಲನುಭವಿಸಿದ್ದಾರೆ.

ರೋಚಕ ಹೋರಾಟದಿಂದ ಕೂಡಿದ್ದ ಫೈನಲ್ ಪಂದ್ಯದ ಮೊದಲ ಗೇಮ್ ಗೆದ್ದು ಸಿಂಧು ಮುನ್ನಡೆ ಸಾಧಿಸಿದ್ದರು. ಆದರೆ ಪ್ರಬಲ ಹೋರಾಟ ನಡೆಸಿದ ಅಕಾನೆ ಯಾಮಾಗುಚಿ 2 ಹಾಗೂ 3 ನೇ ಗೇಮ್ ಗೆಲ್ಲುವ ಮೂಲಕ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು.

ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಚೆನ್ ಯುಫೇ ವಿರುದ್ಧ ಜಯಿಸಿ ಸಿಂಧು ಫೈನಲ್ ತಲುಪಿದ್ದರು. ಪಿ.ವಿ ಸಿಂಧು ದುಬೈ ಸುಪರ್ ಸಿರೀಸ್ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದರು. ಈ ಮೊದಲು 2011 ರಲ್ಲಿ ಸೈನಾ ನೆಹ್ವಾಲ್ ದುಬೈ ಸೂಪರ್ ಸಿರೀಸ್ ಫೈನಲ್ ತಲುಪಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com