ಗುಜರಾತ್‌ನಲ್ಲಿ ಕಮಲ ಸೋಲುವುದು ಖಂಡಿತ : BJP ನಾಯಕ..!!!

ಅಹಮದಾಬಾದ್‌ : ಗುಜರಾತ್‌ ಚುನಾವಣಾ ಫಲಿತಾಂಶಕ್ಕಾಗಿ ದೇಶದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಗೇ ಗೆಲುವಾಗಲಿದೆ ಎನ್ನಲಾಗಿದೆ. ಆದರೆ ಅನೇಕ ರಾಜಕೀಯ ವಿಶ್ಲೇಷಕರು ಈಗಲೂ ಕಾಂಗ್ರೆಸ್‌ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್‌ ಕಾಕಡೆ ಅವರು ಬಿಜೆಪಿ ಗುಜರಾತ್‌ನಲ್ಲಿ ಸೋಲನುಭವಿಸಲಿದೆ ಎಂದಿದ್ದು, ಬಿಜೆಪಿಗೆ ಮುಜುಗರ ತಂದಿಟ್ಟಿದೆ. ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಠಿಯಾಗಿದ್ದು, ಪಕ್ಷ ಸೋಲುತ್ತದೆ. ಅಲ್ಲದೆ ಮುಸ್ಲೀಮರು ನಮ್ಮ ಸರ್ಕಾರದ ವಿರುದ್ದ ಅಸಮಾಧಾನ ಹೊಂದಿದ್ದು ಇದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಮೋದಿ ಪ್ರಧಾನಿಯಾದಾಗಿನಿಂದ ಗುಜರಾತ್ ಅಭಿವೃದ್ದಿಯ ಬಗ್ಗೆ ಗಮನ ಕೊಟ್ಟಿಲ್ಲ. ಚುನಾವಣಾ ಪ್ರಚಾರವನ್ನೂ ಸರಿಯಾಗಿ ಮಾಡಲಿಲ್ಲ. ಅಲ್ಲದೆ ಗುಜರಾತ್‌ನಲ್ಲಿ ರಾಹುಲ್‌ ಗಾಂಧಿ ವರ್ಚಸ್ಸು ಹೆಚ್ಚಿದೆ. ಈ ಕಾರಣದಿಂದ ಕಾಂಗ್ರೆಸ್‌ ಗುಜರಾತ್‌ನಲ್ಲಿ ಗೆಲುವು ಸಾಧಿಸುತ್ತದೆ ಎಂದಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com