4ಜಿ ಸ್ಪೀಡ್ ಯುದ್ಧದಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಮುಂದೆ..!! ಇಲ್ಲಿದೆ ಫುಲ್ ಡೀಟೈಲ್ಸ್..!!

 

ವೈರ್‌ಲೆಸ್ ಕವರೇಜ್ ಮ್ಯಾಪಿಂಗ್ ಮಾಡುವ ಜಾಗತಿಕ ಕಂಪನಿ “ಓಪನ್​ ಸಿಗ್ನಲ್”​ ಜಗತ್ತಿನ 77 ರಾಷ್ಟ್ರಗಳಲ್ಲಿ 4ಜಿ ಡೌನ್​ಲೋಡ್​ ಸ್ಪೀಡ್​ ಎಷ್ಟಿದೆ ಎಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿದ್ದ 77 ರಾಷ್ಟ್ರಗಳಲ್ಲಿ ಭಾರತ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.!! ಇನ್ನು ಓಪನ್​ ಸಿಗ್ನಲ್ ಸಮೀಕ್ಷೆಯ ಈ ಪಟ್ಟಿಯಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನವೇ ಭಾರತಕ್ಕಿಂತ ಹೆಚ್ಚಿನ ಸ್ಥಾನ (69ನೇ ಸ್ಥಾನ) ಪಡೆದಿದ್ದು, ಹಾಗಾದರೆ ಭಾರತದಲ್ಲಿ 4G ಡೌನ್​ಲೋಡ್​ ಸ್ಪೀಡ್ ಎಷ್ಟು?

ಸಮೀಕ್ಷೆ ನಡೆದದ್ದು ಹೇಗೆ?
ಪ್ರಪಂಚದಾದ್ಯಂತ 77 ದೇಶಗಳಲ್ಲಿ 4G ಲಭ್ಯತೆ ಮತ್ತು 4G ವೇಗವನ್ನು ಹೋಲಿಸಲು 3.8 ದಶಲಕ್ಷ ಸ್ಮಾರ್ಟ್ಫೋನ್ ಮತ್ತು ಇತರ ಮೊಬೈಲ್ ಸಾಧನ ಬಳಕೆದಾರರಿಂದ ಮಾಹಿತಿ ಸಂಗ್ರಹಿಸಲಾಗಿದೆ. 50 ಬಿಲಿಯನ್‌ಗಿಂತಲೂ ಹೆಚ್ಚಿನ ಮಾಪನಗಳನ್ನು ಲೆಕ್ಕಹಾಕಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಓಪನ್ ಸಿಗ್ನಲ್ ಹೇಳಿದೆ

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಭಾರತದಲ್ಲಿನ ಸರಾಸರಿ 4ಜಿ ಡೌನ್​ಲೋಡ್​ ಸ್ಪೀಡ್​ 6.1 ಎಂಬಿಪಿಎಸ್ ಮಾತ್ರ.!! ಇದು ಜಾಗತಿಕ ಸರಾಸರಿಯಾದ 16.6 ಎಂಬಿಪಿಎಸ್​ಗಿಂತಲೂ 10 ಎಂಬಿಪಿಎಸ್​ ಕಡಿಮೆ ಇರುವುದರಿಂದ 77 ರಾಷ್ಟ್ರಗಳಲ್ಲಿ ಭಾರತ ಕೊನೆಯ ಸ್ಥಾನವನ್ನು ಪಡೆಯಲು ಕಾರಣವಾಗಿದೆ.!!

ಭಾರತದಲ್ಲಿ ಜಿಯೋ ಬೆಸ್ಟ್
ಭಾರತದಲ್ಲಿ ಶೇ. 84 ಬಾರಿ 4ಜಿ ನೆಟ್​ವರ್ಕ್​ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ದೇಶದಲ್ಲಿ 4 ಜಿ ಸೇವೆ ನೀಡುತ್ತಿರುವ ಕಂಪನಿಗಳಲ್ಲಿ ರಿಲಯನ್ಸ್​ ಜಿಯೋ ಅತ್ಯಂತ ವೇಗದ ಇಂಟರ್​ನೆಟ್ ಸೇವೆ ಒದಗಿಸುತ್ತಿದೆ. ಉಳಿದ ಕಂಪನಿಗಳ ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಲ್ಲ ಎಂದು ವರದಿ ತಿಳಿಸಿದೆ.

ಹೆಚ್ಚು ಸ್ಪೀಡ್ ಡೇಟಾ ನೀಡುತ್ತಿರುವ ದೇಶಗಳು
ವಿಶ್ವದಲ್ಲೇ ಅತ್ಯಂತ ಹೆಚ್ಚು ಡೌನ್​ಲೋಡ್​ ಸ್ಪೀಡ್​ ಕಲ್ಪಿಸುತ್ತಿರುವ ದೇಶ ಎಂಬ ಖ್ಯಾತಿಗೆ ಸಿಂಗಾಪುರ ಪಾತ್ರವಾಗಿದೆ. ಇಲ್ಲಿ 4ಜಿ ಡೌನ್​ಲೋಡ್​ ಸ್ಪೀಡ್​ 46.64 ಎಂಬಿಪಿಎಸ್​ ಇದೆ.! ಇನ್ನು ಸ್ಥಿರತೆಯಲ್ಲಿ ದಕ್ಷಿಣ ಕೊರಿಯಾ ಮೊದಲಿದ್ದರೆ, ನಾರ್ವೆ, ಹಂಗೇರಿ ಮತ್ತು ನೆದರ್​ಲೆಂಡ್ ದೇಶಗಳು ನಂತರದ ಸ್ಥಾನ ಪಡೆದಿವೆ.!!

ದೇಶದ ಪ್ರತಿಯೊಬ್ಬರಿಗೂ ಅತ್ಯಂತ ವೇಗದ 4 ಜಿ ಸೇವೆ ಒದಗಿಸುತ್ತಿರುವುದಾಗಿ ಭಾರತದ ಟೆಲಿಕಾಂ ಸೇವಾ ಕಂಪನಿಗಳು ಹೇಳಿಕೊಳ್ಳುತ್ತಿವೆ. ಆದರೆ, ಜಿಯೋ ಬಿಟ್ಟರೆ ಇನ್ನಾವ ಟೆಲಿಕಾಂ ಕಂಪೆನಿಗಳು ಕೂಡ ಸರಿಯಾದ 4G ವೇಗದ ಡೇಟಾವನ್ನು ಒದಗಿಸಲು ವಿಫಲವಾಗಿವೆ.!!

3 thoughts on “4ಜಿ ಸ್ಪೀಡ್ ಯುದ್ಧದಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಮುಂದೆ..!! ಇಲ್ಲಿದೆ ಫುಲ್ ಡೀಟೈಲ್ಸ್..!!

Leave a Reply

Your email address will not be published.