WATCH : ಸಚಿನ್ vs ಬ್ರೆಟ್ ಲೀ Go-Kart ರೇಸ್ : ರೋಚಕ ಸ್ಪರ್ಧೆಯಲ್ಲಿ ಗೆದ್ದಿದ್ದು ಯಾರು..?

God of cricket ಎಂದೇ ಖ್ಯಾತಿಯಾದ ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಟ ಬ್ಯಾಟ್ಸಮನ್ ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾದ ಬ್ರೆಟ್ ಲೀ ತಮ್ಮ ಆಕ್ರಮಣಕಾರಿ ವೇಗದ ಬೌಲಿಂಗ್ ನಿಂದ ಬ್ಯಾಟ್ಸಮನ್ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಬ್ರೆಟ್ ಲೀ ನಡುವಿನ ಹಣಾಹಣಿ ನೋಡಲು ಸೊಗಸಾಗಿರುತ್ತಿತ್ತು.

ಸಚಿನ್ ಹಾಗೂ ಬ್ರೆಟ್ ಲೀ ಈಗ ಮತ್ತೆ ಸ್ಪರ್ಧೆಗಿಳಿದಿದ್ದಾರೆ. ಆದರೆ ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಾಗಿ ಮುಂಬೈನ ಗೋ ಕಾರ್ಟಿಂಗ್ ಟ್ರ್ಯಾಕ್ ನಲ್ಲಿ ಕಾರ್ ರೇಸ್ ಗಿಳಿದಿದ್ದಾರೆ. ಈ ರೋಚಕ ರೇಸಿನಲ್ಲಿ ಆರಂಭದಲ್ಲಿ ಲೀ ಮುಂದಿದ್ದರೂ, ನಂತರ ಸಚಿನ್ ಮೇಲುಗೈ ಸಾಧಿಸಿ ವಿಜಯಿಯಾಗಿದ್ದಾರೆ. ಈ ಮುಂಚೆ 2006 ರಲ್ಲಿ ಗೋ ಕಾರ್ಟಿಂಗ್ ರೇಸ್ ನಡೆದಾಗಲೂ, ಲೀ ವಿರುದ್ಧ ಸಚಿನ್ ವಿಜಯಶಾಲಿಯಾಗಿದ್ದರೂ.

Leave a Reply

Your email address will not be published.

Social Media Auto Publish Powered By : XYZScripts.com