Cricket : ಒಂದೇ ಓವರಿನಲ್ಲಿ 6 ಸಿಕ್ಸರ್ ಬಾರಿಸಿದ ಜಡೇಜಾ : ಯುವಿ, ಶಾಸ್ತ್ರಿ ಸಾಲಿಗೆ ಸೇರ್ಪಡೆ..!

ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಒಂದು ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಮ್ರೇಲಿ ವಿರುದ್ಧ ನಡೆದ ಅಂತರ ಜಿಲ್ಲೆ ಟಿ-20 ಪಂದ್ಯದಲ್ಲಿ, ಜಾಮನಗರ್ ಪರವಾಗಿ ಆಡಿದ ಜಡೇಜಾ ಈ ಸಾಧನೆ ಮಾಡಿದ್ದಾರೆ.

ಆಫ್ ಸ್ಪಿನ್ನರ್ ನೀಲಮ್ ವಮ್ಜಾ ಅವರು ಎಸೆದ 15 ನೇ ಓವರಿನಲ್ಲಿ ಆರೂ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಜಡೇಜಾ ಈ ಸಾಧನೆ ಮಾಡಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 69 ಎಸೆತಗಳಲ್ಲಿ 154 ರನ್ ಗಳಿಸಿದ್ದಾರೆ.

Image result for ravindra jadeja six

1985 ರಲ್ಲಿ ನಡೆದ ರಣಜಿಟ್ರೋಫಿ ಪಂದ್ಯದಲ್ಲಿ ರವಿಶಾಸ್ತ್ರಿ ಎಡಗೈ ಸ್ಪಿನ್ನರ್ ತಿಲಕ್ ರಾಜ್ ಎಸೆದ ಒಂದೇ ಓವರಿನಲ್ಲಿ 6 ಸಿಕ್ಸರ್ ಬಾರಿಸಿದ್ದರು. ಬಳಿಕ 2007 ರ ವಿಶ್ವಕಪ್ ನಲ್ಲಿ ಡರ್ಬನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಈಗ ಸರ್ ಜಡೇಜಾ ಈ ಸಾಲಿಗೆ ಸೇರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com