Ranaji Cricket : ಕೋಲ್ಕತಾದಲ್ಲಿ ಕರ್ನಾಟಕ – ವಿದರ್ಭ ಸೆಮಿಫೈನಲ್ ಹಣಾಹಣಿ

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ರವಿವಾರದಿಂದ ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವೆ ರಣಜಿ ಟ್ರೋಫಿಯ ಸೆಮಿಫೈನಲ್ ಆರಂಭಗೊಳ್ಳಲಿದೆ. ಫೈನಲ್ ಸ್ಥಾನಕ್ಕಾಗಿ ಉಭಯ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಇನ್ನಿಂಗ್ಸ್ ಹಾಗೂ 20 ರನ್ ಗಳಿಂದ ಸೋಲಿಸಿದ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಪಡೆ ಸೆಮಿ ಫೈನಲ್ ತಲುಪಿದೆ. ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಇದೇ ಮೊದಲ ಬಾರಿ ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ.

ಕರ್ನಾಟಕ ಇದುವರೆಗೆ 8 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿದೆ. 2013 ಹಾಗೂ 2014 ರಲ್ಲಿ ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ಸತತವಾಗಿ ಎರಡು ವರ್ಷ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಮತ್ತದೇ ಇತಿಹಾಸವನ್ನು ಮರುಕಳಿಸುವ ಉದ್ದೇಶದೊಂದಿಗೆ ರವಿವಾರ ಕರ್ನಾಟಕದ ಆಟಗಾರರು ಕಣಕ್ಕಿಳಿಯಲಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ 1142 ರನ್ ಗಳಿಸಿರುವ ಮಯಂಕ್ ಅಗರವಾಲ್ ಕರ್ನಾಟಕ ತಂಡದ ಬ್ಯಾಟಿಂಗ್ ಬಲ ಎನಿಸಿದ್ದಾರೆ. ಶ್ರೇಯಸ್ ಗೋಪಾಲ್, ವಿನಯ್ ಕುಮಾರ್, ಕೆ.ಗೌತಮ್ ಉತ್ತಮ ಫಾರ್ಮ್ ನಲ್ಲಿದ್ದಾರೆ.

ಇನ್ನೊಂದೆಡೆ ರವಿವಾರದಿಂದ ದೆಹಲಿ ಹಾಗೂ ಬೆಂಗಾಲ್ ತಂಡಗಳ ನಡುವೆ ಪುಣೆಯಲ್ಲಿ ಸೆಮಿಫೈನಲ್ ಫೈಟ್ ಆರಂಭಗೊಳ್ಳಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com