ಮಲಮಗಳನ್ನು 19ವರ್ಷ Rape ಮಾಡಿದ : 9 ಮಕ್ಕಳ ತಾಯಿಯನ್ನಾಗಿ ಮಾಡಿದ….ಮುಂದೇನಾಯ್ತು?

ಮೆಕ್ಸಿಕೋ : ತನ್ನ ಮಲಮಗಳನ್ನು ಅಪಹರಿಸಿ 19 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವಸಗಿದ ಹಿನ್ನೆಲೆಯಲ್ಲಿ 63 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ 11 ವರ್ಷದವಳಿದ್ದಾಗ ಆಕೆಯ ಮಲ ತಂದೆ ಮಗಳನ್ನು ಅಪಹರಿಸಿ ನಿರಂತರವಾಗಿ 19 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಲ್ಲದೆ, 9 ಮಕ್ಕಳ ತಾಯಿಯನ್ನಾಗಿ ಮಾಡಿದ್ದಾನೆ. ಕಳೆದ ವರ್ಷ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ತಂದೆ ಪತ್ನಿ ಮನೆಯಲ್ಲಿದ್ದಾಗಲೆ ಮಲ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯನ್ನು ಅಪಹರಿಸಿ ಕಾಡಿನಲ್ಲಿ ಸೆರೆಯಾಗಿಸಿಕೊಂಡು ಅಲ್ಲಿಯೂ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ತಿಳಿದುಬಂದಿದೆ.

19 ವರ್ಷಗಳ ಬಳಿಕ ಸಂತ್ರಸ್ತೆ ಕಾಡಿನಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com