ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ, ಬೊಗಳೆದಾಸಯ್ಯ : ಯಡಿಯೂರಪ್ಪ

ಕೊಪ್ಪಳ : ಸಿಎಂ ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ. ಬೊಗಳೆ ದಾಸಯ್ಯ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಸಿಎಂ, ವಿರುದ್ದ ಹರಿಹಾಯ್ದಿದ್ದಾರೆ. ಜೊತೆಗೆ ಸಿಎಂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಶ್ವೇತ ಪತ್ರ ಹೊರಡಿಸದಿದ್ರೆ ನಾವು ಕಪ್ಪು ಪತ್ರ ಹೊರಡಿಸುತ್ತೇವೆ. ಸಿದ್ದರಾಮಯ್ಯ ಅಧಿಕಾರ ಕ್ಕೆ ಬಂದಮೇಲೆ ಹೈ -ಕ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್‌ ವಿರುದ್ದ ಗುಡುಗಿದ್ದಾರೆ.

ಇದೇವೇಳೆ ಮಾತನಾಡಿದ ಬಿಎಸ್‌ವೈ, ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ದೆಹಲಿಯಲ್ಲಿ ಸಭೆ ಕರೆದಿದ್ರು. ಆಗ ಯಾವ ರಾಜಕೀಯ ಪಕ್ಷದವರು ಲೋಪದ ಬಗ್ಗೆ ಮಾತನಾಡಿಲ್ಲ. ಈಗ ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ವಿರೋಧಪಕ್ಷದವರು ಹಗುರವಾಗಿ ಮಾತನಾಡ್ತಿದ್ದಾರೆ. ದೆಹಲಿ, ಹಿಮಾಚಲ ಪ್ರದೇಶದಲ್ಲಿ ಮತದಾನೋತ್ತರ ಸಮೀಕ್ಷೆ ನೋಡಿ ಸಿಎಂ ದಂಗಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಡಿ, 15 ರೊಳಗೆ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸ್ತೇನೆ ಎಂದಿದ್ದ ಬಿಎಸ್ ವೈ ಈಗ ಉಲ್ಟಾ ಹೊಡೆದಿದ್ದಾರೆ. ಗುಜರಾತ್ ,ಹಿಮಾಚಲಯ ಪ್ರದೇಶದಲ್ಲಿ ಚುನಾವಣೆ ಇತ್ತು. ಹಾಗಾಗಿ ಇತ್ಯರ್ಥ ಪಡಿಸಲಿಕ್ಕೆ ಆಗಲಿಲ್ಲ. ಚುನಾವಣಾ ಫಲಿತಾಂಶದ ಏಳೆಂಟು ದಿನದ ಒಳಗೆ ಸಮಸ್ಯೆ ಇತ್ಯರ್ಥ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ.

ನಾನೇನು ಕಳ್ಳತನ ಮಾಡಿದ್ದೀನೇನು. ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದೀನಿ ಎನ್ನುವ ಅವರು, ಅದನ್ನು ಬಹಿರಂಗಪಡಿಸಲಿ ಎಂದಿದ್ದಾರೆ. ಜೊತೆಗೆ ಸಿಎಂ ಒಬ್ಬ ಸುಳ್ಳುಗಾರ, ಎಸಿಬಿಯಲ್ಲಿ ಸಿಎಂ ವಿರುದ್ಧ 56 ದೂರುಗಳಿವೆ. ಯಾಕೆ ಎಫ್ ಐಆರ್ ದಾಖಲಾಗ್ತಿಲ್ಲ.  ದೂರುಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ. 150 ಸೀಟು ಗೆದ್ದು ಅಧಿಕಾರ ಕ್ಕೆ ನಾವು ಬರುತ್ತೇವೆ. ಸಿಎಂ ನೀವೂ 50 ಸೀಟು ಬರೋಲ್ಲಂತ ಹೇಳಿದ್ದಾರೆ ಅನ್ನುವ ಪತ್ರಕರ್ತರ ಪ್ರಶ್ನೆಗೆ ಯಡಿಯೂರಪ್ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಹೇಳಿರೋದಕ್ಕೆ ನಾನು ಪ್ರತಿಕ್ರಿಯೆ ಕೊಡಕ್ಕೆ ಬಂದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com