JDS ರಾಜ್ಯಾಧ್ಯಕ್ಷ HDK ಗೆ ಜನ್ಮದಿನದ ಸಂಭ್ರಮ : ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು 59 ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳ ಮಧ್ಯೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಈ ವೇಳೆ ಜೆಡಿಎಸ್‌ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರು ಭಾಗಿಯಾಗಿದ್ದರು. ಜೆ.ಪಿ ನಗರ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಸಾವಿರಾರು ಆಭಿಮಾನಿಗಳು ಎಚ್‌ಡಿಕೆ ಅವರ ಮನೆಯ ಮುಂದೆ ಜಮಾಯಿಸಿದ್ದು,  ಇದೇ ಸಂದರ್ಭದಲ್ಲಿ ಎಚ್‌ಡಿಕೆ ಪುತ್ರ ನಿಖಿಲ್ ತಂದೆಗೆ ಶುಭ ಕೋರಿದರು.

ಇದೇ ವೇಳೆ ಮಾತನಾಡಿದ ಎಚ್‌ಡಿಕೆ, ನನ್ನ ಹುಟ್ಟು ಹಬ್ಬದಂದು ರಾಜ್ಯದ ಹಲವಾರು ಭಾಗದಿಂದ ಅಭಿಮಾನಿಗಳು ಬಂದಿದ್ದು, ಅವರೊಂದಿಗೆ ಹುಟ್ಟುಹಬ್ಬ ಆಚರಿಸುವುದು ನನ್ನ ಪುಣ್ಯ. ಇದು ಯಾವುದೋ ಜನ್ಮದ ಋಣವಿರಬೇಕು. ಕಲಾವಿದರಿಗೆ ರಾತ್ರಿಯೆಲ್ಲಾ ಕಾದು ಹುಟ್ಪುಹಬ್ಬ ಆಚರಿಸುತ್ತಾರೆ. ಆದರೆ ರಾಜಕೀಯ ವ್ಯಕ್ತಿಯನ್ನ ಯುವಕರು ಈ ಮಟ್ಟಿಗೆ ಗುರುತಿಸುತ್ತಿರುವುದು ನನ್ನ ಜವಾಬ್ದಾರಿ ಹೆಚ್ಚುವಂತೆ ಮಾಡಿದೆ ಎಂದಿದ್ದಾರೆ. ಅಲ್ಲದೆ ಇಂದು ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವುಗಳಿಗೆಲ್ಲ ಚಾಲನೆ ನೀಡಿ, ಇಂದು ಅಭಿಮಾನಿಗಳೊಂದಿಗೆ ಕಳೆಯುವುದಾಗಿ ಹೇಳಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com